Ad imageAd image

ದೊಡ್ಡಬಿದರಕಲ್ಲು ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡರನ್ನು ಗೆಲ್ಲಿಸಲು ಮುಖಂಡ ಪೂರ್ವ ಭಾವಿ ಸಭೆ

Bharath Vaibhav
ದೊಡ್ಡಬಿದರಕಲ್ಲು ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡರನ್ನು ಗೆಲ್ಲಿಸಲು ಮುಖಂಡ ಪೂರ್ವ ಭಾವಿ ಸಭೆ
WhatsApp Group Join Now
Telegram Group Join Now

ಯಶವಂತಪುರ :- ಚಿಕ್ಕಮಂಗಳೂರಿನಲ್ಲಿ ಕೆಲಸ ಮಾಡಿದ್ದರೆ ಅಲ್ಲಿಂದ ಗೋಬ್ಯಾಕ್ ಶೋಭಕ್ಕ ಎನ್ನುತ್ತಿರಲಿಲ್ಲ. ಅಲ್ಲಿಂದ ಗೋಬ್ಯಾಕ್ ಅಂದವರನ್ನು ನಮ್ಮ ಕ್ಷೇತ್ರಕ್ಕೆ ಸ್ವಾಗತ ಮಾಡಲಾಗುವುದಿಲ್ಲ. ಸದಾನಂದಗೌಡರ ರಾಜಕೀಯ ಜೀವನಕ್ಕೆ ಮುಳುವಾಗಿ ತಮ್ಮ ಬೇರೆ ರೀತಿಯ ರಾಜಕೀಯ ಬೆಂಬಲದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ’, ಎಂದು ಮಾಜಿ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ ಸೋಮಶೇಖರ್ ಹೇಳಿದರು.

ದೊಡ್ಡಬಿದರಕಲ್ಲು ವಾರ್ಡ್ ನ ಭೈರವೇಶ್ವರ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಬೆಂಗಳೂರು ಉತ್ತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಫ್ರೊ. ರಾಜೀವ್ ಗೌಡರ ಪರವಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಮಾತನಾಡಿದ ಅವರು, ‘ಸೌಮ್ಯ ಸ್ವಭಾವದ ಪ್ರೊ. ರಾಜೀವ್ ಗೌಡರು ಆರ್ಥಿಕ ತಜ್ಞರು ಹಾಗೂ ವಿಚಾರವಂತರಾಗಿದ್ದು ಅವರ ಗೆಲುವಿನಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತವೆ. ಹಾಗೆಯೇ ನಮ್ಮ ಕ್ಷೇತ್ರದ ಜನರಿಗೆ ಸಹಕಾರ ನೀಡುವ ಸರ್ಕಾರಕ್ಕೆ ನಮ್ಮ ಬೆಂಬಲವಿದೆ’, ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ನಾಗರಾಜ್, ‘ಗೃಹ ಲಕ್ಷ್ಮೀ, ಅನ್ನಭಾಗ್ಯ, ಗೃಹ ಜ್ಯೋತಿ, ಯುವ ನಿಧಿ ಸೇರಿದಂತೆ ಐದು ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದು ಫಲಾನುಭವಿಗಳಾದ ಮತದಾರ ಪ್ರಭುಗಳು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ. ಎಲ್ಲಾ ರಂಗಗಳಲ್ಲೂ ಅನುಭವವಿರುವ ಫ್ರೊ. ರಾಜೀವ್ ಗೌಡರಂತಹ ವಿಚಾರವಂತರು ಗೆಲ್ಲುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಲಿವೆ’, ಎಂದು ವಿ.ನಾಗರಾಜ್ ಸ್ವಾಗತ ಕೋರಿ ಮಾತಾಡಿದರು.

ಈ ಸಂದರ್ಭದಲ್ಲಿ ಹೊಸಹಳ್ಳಿ ಸತೀಶ್, ನಾಗರಾಜ್, ಗಂಗರಾಜು, ಭಾಗ್ಯಮ್ಮ, ಹರೀಶ್, ನಾರಾಯಣಪ್ಪ, ವೆಂಕಟಾಚಲಪ್ಪ ಸೇರಿದಂತೆ ಹಲವಾರು ಮುಖಂಡರು, ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.

ವರದಿ:-ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!