Ad imageAd image

ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ ರವರ ಪರವಾಗಿ

Bharath Vaibhav
ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ ರವರ ಪರವಾಗಿ
WhatsApp Group Join Now
Telegram Group Join Now

ರಾಯಚೂರು :-ನಗೌಡ ದದ್ದಲ್ ರವರು ಚಂದ್ರ ಬಂಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು . ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಯಲ್ಲಿ ಬರುವ ದೇವಸೂಗುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಚಂದ್ರಬಂಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಯಾಪಲದಿನ್ನಿ ಗ್ರಾಮದಲ್ಲಿ ಮಾನ್ಯ ಶಾಸಕರು ಮಾತನಾಡಿ 5 ಗ್ಯಾರಂಟಿಗಳನ್ನು ಘೋಷಣೆಯನ್ನು ಮಾಡಿದ್ದರೆ

ಪ್ರತಿ ವರ್ಷ 1ಲಕ್ಷ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ಮಹಿಳಾ ನ್ಯಾಯ

1 ಲಕ್ಷ ವೇತನ ಪ್ರತಿಯೊಬ್ಬ ಯುವಕನಿಗೆ ಉದ್ಯೋಗದ ಗ್ಯಾರಂಟಿ

ದಿನಕ್ಕೆ 400 MGNREGA ಸೇರಿದಂತೆ ರಾಷ್ಟೀಯ ಕನಿಷ್ಠ ವೇತನ ಶ್ರಮಿಕ ನ್ಯಾಯ

ಸಾಲಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಸೂತ್ರದ ಪ್ರಕಾರ MSP ಗೆ ಕಾನೂನು ಸ್ಥಾನಮಾನ

ಜಾತಿಗಣತಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಖಚಿತ ಪಡಿಸಿಕೊಳ್ಳಲು ರಾಷ್ಟ್ರ ವ್ಯಾಪ್ತಿ ಜನಗಣತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿ ಸಮುದಾಯವನ್ನು ಪರಿಗಣಿಸಲಾಗುವುದು,

ಕರ್ನಾಟಕ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದ ಗ್ಯಾರಂಟಿ ಸರ್ಕಾರ

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಬದ್ದನಾಗಿದ್ದು ನನ್ನ ಗ್ಯಾರಂಟಿ ಮುಖಾಂತರ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಜಿ ಕುಮಾರ ನಾಯಕ ರವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕೇಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ ವಸಂತಕುಮಾರ್, ರಾಯಚೂರು ಜಿಲ್ಲಾ ಅಧ್ಯಕ್ಷರಾದ ಬಸವರಾಜ ಪಾಟೀಲ ಇಟಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಶಾಂತಪ್ಪ, ಹಾಗೂ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ನಾಮನಿರ್ದೇಶನ ಸದ‌ಸ್ಯರುಗಳು ತಾಯಿಯಂದಿರು , ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ:-ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!