ನಿಪ್ಪಾಣಿ : ತಾಲೂಕಿನ ಜತ್ರಾಟ ಗ್ರಾಮ ಪಂಚಾಯತಿಯಲ್ಲಿ 2020 ರಿಂದ 2025 ರವರೆಗೆ ನಡೆದ ಬ್ರಷ್ಟಾಚಾರ ಕುರಿತು ಗ್ರಾಮಸ್ಥರು ಪಂಚಾಯತಿಯ ಮುಂದೆ ಉಪವಾಸ ಸತ್ಯಾಗ್ರಹ.
2020 ರಿಂದ 24 ರ ಸಂದರ್ಭದಲ್ಲಿರುವ ಅಭಿವೃದ್ಧಿ ಅಧಿಕಾರಿ ಹಾಗೂ ಈಗಿರುವ ಹಾಲಿ ಅಭಿವೃದ್ಧಿ ಅಧಿಕಾರಿ 2021ರಿಂದ 2025 ರವರೆಗೆ ಜತ್ರಾಟ ಗ್ರಾಮ ಪಂಚಾಯತಿ ಅಧಿಕಾರಿಗಳು ಅಧ್ಯಕ್ಷರು ಮಾಡಿರುವ ಹಗರಣ ಕುರಿತು ಜತ್ರಾಟ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟ ಗ್ರಾಮಸ್ಥರು ಭ್ರಷ್ಟಾಚಾರ ಕುರಿತು ಕೇಳಿದ ಆರ್.ಟಿ.ಐ.ಮಾಹಿತಿಗೆ ಸರಿಯಾದ ಸಮಯಕ್ಕೆ ಸರಿಯಾದ ಉತ್ತರ ನೀಡದ ಕಾರಣ ಅವರ ವಿರುದ್ಧ ಜಾತ್ರಾಟ ಪಂಚಾಯತಿ ಎದುರುಗಡೆ ಉಪವಾಸ ಸತ್ಯಾಗ್ರ ನ್ಯಾಯ ಸಿಗುವವರೆಗೂ ಈ ಸತ್ಯಾಗ್ರ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ನಮ್ಮ ವಾಹಿನಿಯ ರಿಪೋರ್ಟರ್ ಅಭಿವೃದ್ಧಿ ಅಧಿಕಾರಿಗಳ ಅಧ್ಯಕ್ಷರನ್ನು ಪ್ರಶ್ನಿಸಿದರೆ ಅವರು ಇದು ನನಗೆ ಗೊತ್ತಿಲ್ಲ ಈ ಸಂದರ್ಭದಲ್ಲಿ ಶಿವಾಜಿ ರನಮಾಳೆ ಇವರು ನಾನು 2022 ರಿಂದ 23ರ ವರೆಗೆ ಮಾತ್ರ ಅಧ್ಯಕ್ಷನಾಗಿದ್ದೆ ನನ್ನ ಸಮಯದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಹಾ ಅಧ್ಯಕ್ಷರು ಬೇರೆಯಾಗಿದ್ದಾರೆ.ಎಂದು ಹೇಳಿದರು ಇನ್ನೂ ಇಬ್ಬರು ಅಧ್ಯಕ್ಷರು ನಮ್ಮ ವಾಹಿನಿಗೆ ಮಾಹಿತಿ ನೀಡಲು ಬರಲಿಲ್ಲ.
ಈ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಶೀರ್ಪೆವಾಡಿಯಲ್ಲಿ ರೈತನಿಗೆ ಸಂಬಂಧಪಟ್ಟ ಹಳ್ಳವನ್ನು ಸರಿಪಡಿಸಲು ರೈತನಿಗೆ ಗೊತ್ತಿಲ್ಲದೆ ಸುಮಾರು 3,25,000ಗಳನ್ನು ಬಿಲ್ಲು ತೆಗೆದುಕೊಂಡಿದ್ದಾರೆ ಎಂದು ರೈತನೊಬ್ಬನು ಅರಬ್ಬಿಸಿದ್ದಾನೆ.
ಹಾಗೂ ಆರೋಪ ಜತ್ತ್ರಾಟ ಬಗಲದ ಚಡಕೆ ಮಾಳಾ ಪ್ರದೇಶದಲ್ಲಿ ಕ್ರಿಕೆಟ ಮೈದಾನಕ್ಕಾಗಿ 20 ಲಕ್ಷ ರೂಪಾಯಿ ಬಿಲ್ಲು ಪಡೆದ ಜನರಿಂದ ನೇರ ಆರೋಪ. ಪಂಚಾಯಿತಿ ಎದುರುಗಡೆಯ ಝಂಡಾ ಕಟ್ಟಿ ರಿಪೇರಿ. ಮಾಡಲು 85,000 ಭ್ರಷ್ಟಾಚಾರ ಇಂತಹ ಹಲವಾರು ಭ್ರಷ್ಟಾಚಾರಗಳನ್ನು ಕುರಿತು ಆರ್.ಟಿ.ಐ. ಮಾಹಿತಿಯಲ್ಲಿ ಕೇಳಲಾಗಿತ್ತು ಆದರೆ ಸರಿಯಾದ ಸಮಯಕ್ಕೆ ಮಾಹಿತಿ ಕೊಡದ ಕಾರಣ ಅಲ್ಲಿಯ ಇದಕ್ಕೆ ಸಂಬಂಧಪಟ್ಟ ಜನರು ಉಪವಾಸ ಸತ್ಯಾಗ್ರ ನ್ಯಾಯ ಸಿಗುವವರೆಗೆ ಕೈಗೊಂಡಿದ್ದಾರೆ.
ಉಪವಾಸ ಸತ್ಯಾಗ್ರಕ್ಕೆ ಮುಖ್ಯವಾದ ಆರೋಪ ನಾವು ಕೇಳಿದ ಸಮಯಕ್ಕೆ ಆರ್.ಟಿ.ಐ. ಮಾಹಿತಿಯನ್ನು ಸರಿಯಾದ ಸಮಯ ಹಾಗೂ ತಾರಿಖಿಗೆ ಕೊಡದ ಅಭಿವೃದ್ಧಿ ಅಧಿಕಾರಿ ದಯಾನಂದ್ ಹಾಗೂ A.D. ಇವರು ಮುಖ್ಯಕಾರಣ ವೆಂದು ನಾವು ಉಪವಾಸ ಸತ್ಯಾಗ್ರ ಆಂದೋಲನ ಹೂಡಿದ್ದೇವೆ ಪಂಚಾಯಿತಿಗೆ ಸಂಬಂಧಪಟ್ಟ ಗ್ರಾಮಸ್ಥರು ನಮ್ಮ ವಾಹಿನಿಗೆ ತಿಳಿಸಿದರು.
ಈ ಸಂದರ್ಭದಲ್ಲಿರುವ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರನ್ನು ಹಾಲಿ ಅಧ್ಯಕ್ಷಗಳನ್ನು ಈ ಭ್ರಷ್ಟಾಚಾರ ಕುರಿತು ತನಿಖೆ ಆಗಬೇಕಾಗಿದೆ ಇದಕ್ಕೆ ಸಂಬಂಧಪಟ್ಟ ರಾಜ್ಯ ಪಂಚಾಯತ್ ಪಂಚಾಯತ್ ರಾಜ್ ಸಚಿವರು ಜಿಲ್ಲೆಯ ಮೇಲಾಧಿಕಾರಿಗಳು ಜಿಲ್ಲೆಯಲ್ಲಿ ನಡೆಯುವ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಇಂತಹ ಹಲವು ಭ್ರಷ್ಟಾಚಾರಕ್ಕೆ ಒಳಪಟ್ಟ ಪಂಚಾಯಿತಿಗಳನ್ನು ಪರಿಶೀಲಿಸಿ ಜನರಿಗೆ ನ್ಯಾಯ ಕೊಡಿಸಬೇಕಾಗಿದೆ.
ಈ ಆಂದೋಲನ ಸಂದರ್ಭದಲ್ಲಿ ಸಂಬಂಧಪಟ್ಟ ಡಾಕ್ಟರ್ ಗಳಿಂದ ಚಿಕಿತ್ಸೆ ಮಾಡಲಾಯಿತು ನಂತರ. ಪ್ರಶಾಂತ್ ಹೋಂಡಕರಿ, ವಿಜಯ ಪವಾರ್, ಸುಯೋಗ್ ಕಲ್ಲೋಳ, ಹಾಗೂ ಸುಮಾರು ಭ್ರಷ್ಟಾಚಾರಕ್ಕೆ ಕೈಗೊಂಡ ಜನರು ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತಿಯಲ್ಲಿದ್ದರು.
ವರದಿ : ರಾಜು ಮುಂಡೆ