ನಿಪ್ಪಾಣಿ : ವಿವಿಧ ಬೇಡಿಕೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳಿಂದ ನಿಪ್ಪಾಣಿ ತಹಶೀಲ್ದಾರ್ ಕಚೇರಿ ಎದುರು ಧರಣಿ ಕುಳಿತು ಪ್ರತಿಭಟನೆ. ಜೊತೆಗೆ ಸರ್ಕಾರಿ ಸುತ್ತೋಲೆ 16 A ಯಲ್ಲಿರುವ ವಿವಿಧ ನಿಯಮಗಳನ್ನು ಸರ್ಕಾರ ಹಿಂದಕ್ಕೆ ಪಡೆಯಲಾಗಿದೆ.
ನೌಕರರ ಕುಟುಂಬದ ಸಮಸ್ಯೆ ಹಾಗೂ ಸಣ್ಣ ಪುಟ್ಟ ಮಕ್ಕಳ ಪಾಲನೆ ಮತ್ತು ಪೋಷಣೆ ಮಾಡಲು ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳಲು ತುಂಬಾ ತೊಂದರೆಗಳು ಉಂಟಾಗುತ್ತವೆ ಆದ್ದರಿಂದ ಇದಕ್ಕೆ ನಮಗೆ ಹಳೆಯ ನಿಯಮವನ್ನು ನೀಡಬೇಕೆಂದು ಸರಕಾರದ ಮೇಲೆ ಒತ್ತಡವನ್ನು ಹೇರಿದರು.
ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ ಅಥವಾ ವಾರಸ ರೀತಿಯ ಮಾಲಿಕತ್ವ ಮೃತರ ಉತ್ತರಾ ಅಧಿಕಾರಿಗಳ ಹೆಸರಿಗೆ ಆಧಾರ್ ಜೋಡಣೆ ನಿರ್ವಹಣೆ ಕಾರ್ಯದ ಸಂದರ್ಭದಲ್ಲಿ ಆಗುವ ಕೆಲವು ನಿಯಮಗಳನ್ನು ಕೈಬಿಡುವಂತೆ ಸೇರಿ ಹಲವು ವಿಷಯಗಳ ಬಗ್ಗೆ ನಮಗೆ ಸಹಕಾರ ನೀಡುವಂತೆ ಮನವಿಯನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.
ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಲ್ಲಾ ರಂಗಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ತಿದ್ದುಪಡಿ ಮಾಡಬೇಕು ಕ್ಷೇತ್ರ ಮಟ್ಟದಲ್ಲಿ ಕರ್ತವ್ಯವನ್ನು ನಿರ್ವಹಿಸುವಾಗ ಜೀವಾಣಿಯಾಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ ತಲಾ 50 ಲಕ್ಷಗಳವರೆಗೆ ಪರಿಹಾರವನ್ನು ಮಂಜೂರು ಮಾಡಬೇಕು ಅಲ್ಲದೆ ಪ್ರಯಾಣಬತ್ತಿ ಮತ್ತು ಆಪತ್ತಿನ ಬಟ್ಟೆಯನ್ನು ಹೆಚ್ಚಿಸಬೇಕು ಹಾಗೂ ಅಧಿಕಾರಿಗಳ ಜೇಷ್ಠತೆಯನ್ನು ರಾಜ್ಯಮಟ್ಟದ ಜೇಷ್ಠತೆಯನ್ನಾಗಿ ಪರಿಗಣಿಸಬೇಕು ಕಚೇರಿ ನಿಯೋಜನೆಯಿಂದ ಬಿಡುಗಡೆಗೊಳಿಸಿ ಮೂಲಹದ್ದೆಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು ಬೆಳೆ ಸಮೀಕ್ಷೆ ಮತ್ತು ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ ಅಥವಾ ತೋಟಗಾರಿಕೆ ಇಲಾಖೆಗೆ ವಹಿಸಬೇಕು ಮತ್ತು ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಹೀಗೆ ಹಲವಾರು ಬೇಡಿಕೆಗಳಿಗಾಗಿ ಸರಕಾರ ಸರಕಾರಕ್ಕೆ ಒತ್ತಾಯಿಸಿದರು.
ಸಂಘದ ಅಧ್ಯಕ್ಷರಾದ ರಮೇಶ್ ಹಂಜಿ ಹಾಗೂ ಸಂತೋಷ್ ಗಸ್ತಿ ಮುಬೀನ್ ಸಣದಿ, ಎಸ್ ಎನ್ ಪೊವಾರ್, ಕೆ ಎಲ್ ಪೂಜಾರಿ, ಡಿಎಲ್ ಹಾಡಕರ್, ಉಮೇಶ್ ಕೋಳಿ, ಎಸ್ ಎಂ ನೇಮನವರ್, ವಿಎನ್ ಅಂಗಡಿ, ಏ ಬಿ ತಳವಾರ್, ಬು ಸಚಿನ್ ಜಾದವ, ಸೇರಿದಂತೆ ಇನ್ನುಳಿದ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




