ಇಳಕಲ್ : ಕಳೆದ ಒಂದು ವಾರಗಳಿಂದ ಕುಡಿಯುವ ನೀರಿಗಾಗಿ ಜನರು ನಿತ್ಯ ಪರದಾಡುತ್ತಿದ್ದರು, ಕುಡಿಯುವ ನೀರಿಗಾಗಿ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸ್ಪಂದಿಸಿದ ಅಧಿಕಾರಿಗಳ ವಿರುದ್ಧ, ಗ್ರಾಮಸ್ಥರು , ಕನಸುದ್ದರಿಂದ ಕೂಡಿದ ನೀರನ್ನು ತುಂಬಿಕೊಂಡು, ಒತ್ತುವ ಬಂಡಿ ಹಾಗೂ ಕೊಡಗಳನ್ನು ಗ್ರಾಮ ಪಂಚಾಯಿತಿಯ ಮುಂದೆ ಇರಿಸಿ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆ ಗ್ರಾಮದ ಮುಖಂಡರಾದ ರಿಯಾಜ್ ವಾಲಿಕಾರ್ ಇವರ ನೇತೃತ್ವದಲ್ಲಿ ನಡೆಯಿತು.
ಸರ್ಕಾರ ಕುಡಿಯುವ ನೀರಿಗಾಗಿ ತುರ್ತು ಹಣವನ್ನು ಮೀಸಲಿಟ್ಟರೂ ಸಹ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿಗಾಗಿ ತಾತ್ಸಾರ ಮಾಡುತಿರುವುದು, ನಿರ್ಲಕ್ಷಕ್ಕೆ ಕಾರಣವಾಗಿದೆ, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಜನರಿಗೆ ಕುಡಿಯುವ ನೀರನ್ನು ಒದಗಿಸಲಿ.
ವರದಿ : ದಾವಲ್ ಶೇಡಂ




