Ad imageAd image

-ಕಂದಗಲ್ ಗ್ರಾಮದಲ್ಲಿ ನಾಗರಪಂಚಮಿ ಹಬ್ಬದಂದು ಮಹಿಳೆಯರು ನಾಗದೇವರ ಮೂರ್ತಿಗೆ ಭಕ್ತಿ ಭಾವದಿಂದ ಹಾಲೇರೆದರು.

Bharath Vaibhav
-ಕಂದಗಲ್ ಗ್ರಾಮದಲ್ಲಿ ನಾಗರಪಂಚಮಿ ಹಬ್ಬದಂದು ಮಹಿಳೆಯರು ನಾಗದೇವರ ಮೂರ್ತಿಗೆ ಭಕ್ತಿ ಭಾವದಿಂದ ಹಾಲೇರೆದರು.
WhatsApp Group Join Now
Telegram Group Join Now

ಇಳಕಲ್:-   ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ನಿಮಿತ್ಯ ಕಂದಗಲ್ ಸೇರಿದಂತೆ ಸುತ್ತಲಿನ ಗ್ರಾಮದ ಮಹಿಳೆಯರು ನಾಗದೇವರ ಮೂರ್ತಿಗೆ ಪೂಜೆ ಸಲ್ಲಿಸಿ ಹಾಲೆರೆದು ಸಂಭ್ರಮಿಸಿದರು ಹೊಸ ವಸ್ತ್ರಗಳನ್ನು ಧರಿಸಿಕೊಂಡು ಶೃಂಗಾರಗೊಂಡು ಮಹಿಳೆಯರು ಮಕ್ಕಳು ಕುಟುಂಬ ಸದಸ್ಯರು ಜೊತೆಗೂಡಿ ನಾಗರಕಟ್ಟೆಗಳು ಇರುವ ಜಾಗಗಳಿಗೆ ಹೋಗಿ ಅಲ್ಲಿ ಹಾಲೆರೆಯುವ ಕಾಯಕದಲ್ಲಿ ನಿರತರಾಗಿದ್ದರು.

ಬೆಳಗಿನಂದಲೇ ಮನೆ ಅಂಗಳ ಮತ್ತು ನಾಗರಕಟ್ಟೆಗಳನ್ನು ಸು ಚಿಗೊಳಿಸಿ ರಂಗೋಲಿ ಹಾಕಿ ತಳಿರು ತೋರಣಗಳಿಂದ ಶೃಂಗರಿಸಿದ್ದರು ಮಹಿಳೆಯರು ಮತ್ತು ಮಕ್ಕಳ ಭಕ್ತಿ ಭಾವದೊಂದಿಗೆ ನಾಗಪ್ಪನ ಪೂಜೆ ನೆರವಹಿಸಿದರು ನಾಗದೇವರ ಮೂರ್ತಿಗೆ ವಿವಿಧ ರೀತಿಯ ಸಿಹಿ ತಿನಿಸುಗಳಾದ ಉಂಡೆ ಅರಳು ತಂಬಿಟ್ಟು ಹಾಲು ಕೊಬ್ರೆ ಬೆಲ್ಲ ಎರೆದು ಪೂಜೆ ಸಲ್ಲಿಸಿ ತಮ್ಮ ಇಷ್ಟರ್ಥಗಳನ್ನು ಈಡೆರಿಸುವಂತೆ ಬೇಡಿಕೊಂಡರು.

ನಾಗ ಪಂಚಮಿ ಹಬ್ಬದ ವಿಶೇಷ ಜೊಕಾಲಿಯನ್ನು ಮಹಿಳೆಯರು ಮಕ್ಕಳು ಜೀಕಿ ಹಬ್ಬದ ಸಂತೊಷ ಹಂಚಿಕೊಂಡರು ಯುವಕರ ಗುಂಪುಗಳು ಸ್ಪರ್ಧೆಯ ಮಾದರಿಯ ಆಟಗಳನ್ನು ಆಡಿ ಗೆಲುವಿನ ಸಂಭ್ರಮ ಹಂಚಿಕೊಳ್ಳುತ್ತಿರುವದು ಕಂಡುಬಂತು,ಹಬ್ಬ ಎರಡು ದಿನಗಳಾದ್ದರಿಂದ ಮೊದಲ ದಿನ ಮಹಿಳೆಯರು ನಾಗರಮುರ್ತಿಗೆ ಹಾಲೆರೆದರು ಎರಡನೆ ದಿನ ಪುರುಷರು ಮನೆಯಲ್ಲಿ ಮಣ್ಣಿನ ನಾಗರ ಮುರ್ತಿಗಳಿಗೆ ಹಾಲೆರೆದರು.

ವರದಿ:- ದಾವಲ್ ಸೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!