Ad imageAd image

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಕೇಸ್ : ದುಷ್ಟನಿಗೆ ಜೈಲೇ ಗತಿ

Bharath Vaibhav
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಕೇಸ್ : ದುಷ್ಟನಿಗೆ ಜೈಲೇ ಗತಿ
WhatsApp Group Join Now
Telegram Group Join Now

ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ಮತ್ತೆ ವಜಾಗೊಳಿಸಿದೆ.

2024, ಏಪ್ರಿಲ್ 18ರಂದು ಹುಬ್ಬಳ್ಳಿಕ ಕೆ.ಎಲ್.ಇ ಕಾಲೇಜು ಆವರಣದಲ್ಲಿ ಆರೋಪಿ ಫಯಾಜ್ ನೇಹಾ ಹಿರೇಮಠ್ ಅವರನ್ನು ಚಾಕುವಿನಿಂದ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ.ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಫಯಾಜ್ ನೇಹಾ ಹಿರೇಮಠಳನ್ನು ಹಾಡಹಗಲೇ ಕಾಲೇಜು ಆವರಣದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ. ಜೈಲು ಪಾಲಾಗಿರುವ ಫಯಾಜ್ ಜಾಮೀನಿಗಾಗಿ ಕಸರತ್ತು ನಡೆಸುತ್ತಿದ್ದಾನೆ. ಈಗಾಗಲೇ ಮೂರು ಬಾರಿ ಫಯಾಜ್ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು.

ಇದೀಗ ನಾಲ್ಕನೇ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕೊಲೆ ಆರೋಪಿ ಫಯಾಜ್ ಗೆ ಜೈಲು ವಾಸವೇ ಗತಿಯಾಗಿದೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!