Ad imageAd image

ಉಡುಪಿ ಹೋಟೆಲ ಒಂದರಲ್ಲಿ,ಮೊನ್ನೆ ಸುಮಾರು ಒಂದುವರೆ ಲಕ್ಷ ಕಳ್ಳತನ

Bharath Vaibhav
ಉಡುಪಿ ಹೋಟೆಲ ಒಂದರಲ್ಲಿ,ಮೊನ್ನೆ ಸುಮಾರು ಒಂದುವರೆ ಲಕ್ಷ ಕಳ್ಳತನ
WhatsApp Group Join Now
Telegram Group Join Now

ನಿಪ್ಪಾಣಿ :-ಶಹರ ಪೊಲೀಸರು 24 ಗಂಟೆಗಳಲ್ಲಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ನಾಲ್ಕರ ಉಡುಪಿ ಹೋಟೆಲ್ನಲ್ಲಿ ಗುರುವಾರ ಬೆಳಿಗ್ಗೆ ಸುಮಾರು ಮೂರರಿಂದ ನಾಲ್ಕು ಗಂಟೆ ಬೆಳಗಿನ ಜಾವ ಸಮಯದಲ್ಲಿ ಕಳ್ಳತನವಾಗಿತ್ತು.

ಆರೋಪಿಯು ಅದೇ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದು ಆತನ ಹೆಸರು ಅಮನ ನಿಸಾರ್ ಆಗಿದ್ದು 21 ವರ್ಷ ವಯಸ್ಸು ಆತನು ದಿಲ್ಲಿ ರಹಿವಾಸಿ ಆಗಿದ್ದನು ಎಂದು ತಿಳಿದಿ ಬಂದಿದೆ
ಹೋಟೆಲ್ ಮಾಲೀಕನು ನಿಪ್ಪಾಣಿಯಲ್ಲಿ ಪ್ರಕರಣವನ್ನು ದಾಖಲಿಸಿದ ನಂತರ ಪೊಲೀಸ್ ಠಾಣೆಯ ಪಿ ಎಸ್ ಐ ಉಮಾದೇವಿ ಅವರು ಒಂದು ವಿಶೇಷ ತಂಡವನ್ನು ರಚಿಸಿ ಮಹಾರಾಷ್ಟ್ರ ರಾಜ್ಯದ ಪುನಾ ಶಹರಕ್ಕೆ ಆರೋಪಿ ಹುಡುಕಾಟಕ್ಕಾಗಿ ತಂಡವನ್ನು ಕಳುಹಿಸಲಾಗಿತ್ತು.

ಕಳ್ಳತನ ಮಾಡಿದ ಆರೋಪಿಯನ್ನು ಪುಣೆಯಲ್ಲಿ ಬಂಧಿಸಿದ ನಂತರ ಅವನ ಹತ್ತಿರದಿಂದ ಸುಮಾರು 8,400/ ರೂಪಾಯಿ ನಗದು ಹಾಗೂ 80,000/ ರೂಪಾಯಿಯ ಬೆಲೆ ಬಾಳುವ ಒಂದು ಮೊಬೈಲ್ ಅನ್ನು ವಶಪಡಿಸಿಕೊಂಡಿರುತ್ತಾರೆ ಇನ್ನುಳಿದ ಹಣವನ್ನು ಆತನು ಮೋಜು ಮಸ್ತಿ ಮಾಡಿರುತ್ತಾನೆ ಆತನು ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ಆತನನ್ನು ಮಹಾರಾಷ್ಟ್ರದಿಂದ ಬಂಧಿಸಿ ಕರೆತಂದು ನಿಪ್ಪಾಣಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಅಲ್ಲಿಂದ ಹಿಂಡಲಗಾ ಕಾರ್ಯಾಗೃಹಕ್ಕೆ ರವಾನಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಎಸ ಐ ಬಳಗ ಕೆ ಬಿ ಮಾಂಗ್, ಎಂ ಜಿ ಮುಜಾವರ್, ಹವಾಲ್ದಾರ್ ಯು ಆರ್ ಮಾಳಗೆ, ಯಾಸಿನ್ ಕಲಾವಂತ ಭಾಗಿಯಾಗಿದ್ದರು ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ.

ವರದಿ ರಾಜು ಮುಂಡೆ .

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!