ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಟೌನ್ ಜಾಮಿಯಾ ಮಸೀದಿಯ ಆಡಳಿತ ಸಮೀತಿ 1ವರ್ಷ 5 ತಿಂಗಳ ಪೂರ್ಣಗೊಳಿಸಿ ಅಭಿವೃದ್ಧಿ ನಿರ್ವಹಣೆ ಮಾಡಿರುವ ವಿವರದ ಒಂದು
ಪಕ್ಷಿನೋಟ ವಿವರಿಸಿದ ಸಮೀತಿ ಮುಖಂಡರು.
ಗುಂಡ್ಲುಪೇಟೆ ಪಟ್ಟಣದ ಜಾಮಿಯಾ ಮಸೀದಿ ಕಛೇರಿಯಲ್ಲಿ ಸುಧ್ಧಿಗಾರರೂಂದಿಗೆ ಮಾತನಾಡಿ ಸಮೀತಿಯ ಕಾರ್ಯವೈಖರಿಯ ಬಗ್ಗೆ ವಿವರಿಸಿದ ಅಧ್ಯಕ್ಷ ಹೆಚ್ ಎಂ ಸರ್ದಾರ್.
ನಗರದ ಖಬ್ರಸ್ತಾನ್ ಆವರಣದಲ್ಲಿ ಸುಮಾರು 15 ಲಕ್ಷರೂಗಳ ಅನುದಾನದಲ್ಲಿ ಹೈಮಾಸ್ಕ ಲೈಟ್ ಹಾಗೂ ಶವ ಸ್ನಾನದ ಕೊಠಡಿಗಳು ನಿರ್ಮಾಣ ಕಾರ್ಯ ಮುಂದುವರಿದಿದೆ.
ಈದ್ಗಾ ಮೈದಾನದ ಅಭಿವೃದ್ಧಿ ಕಾರ್ಯ. ಆವರಣದಲ್ಲಿ ನೂತನ ಜಾವೀದ್ ಮಸೀದಿ ನಿರ್ಮಾಣ ಮತ್ತು ಈದ್ಗಾ ಸ್ಥಳಾಂತರ ಕಾರ್ಯವನ್ನು ದಾನಿಗಳಿಂದ ಮಾಡಿಸಿಕೊಡಲಾಗಿದೆ ಮತ್ತು ಈದ್ಗಾ ಆವರಣಕ್ಕೆ ಪ್ರತೇಕವಾಗಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ಮತ್ತು ವವಾಣಿಜ್ಯ ಮಳಿಗೆಗಳಿಗೆ ಪ್ರತೇಕ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು…
ಗುಂಡ್ಲುಪೇಟೆ ಪಟ್ಟಣದ ಜಾಮಿಯ ಮಸೀದಿ ಪುರಾತನ ಕಾಲದ ನಿರ್ಮಾಣ ತೆರವುಗೊಳಿಸಿ ಹೊಸದಾಗಿ ಮಸೀದಿ ನಿರ್ಮಾಣ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಕೈ ಜೋಡಿಸಿ ಎಂದು ಸಮೀತಿಯ ಅಧ್ಯಕ್ಷರು. ಕಾರ್ಯದರ್ಶಿ ಹಾಗೂ ಸಾದಸ್ಯರುಗಳು ಮನವಿ ಮಾಡಿ ಕೊಂಡಿದ್ದಾರೆ.
ವರದಿ : ಸ್ವಾಮಿ ಬಳೇಪೇಟೆ