ಸೇಡಂ : ತಾಲೂಕಿನ ರಿಬ್ಬನ್ ಪಲ್ಲಿ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸಬ್ ಸೆಂಟರ್ ಇದ್ದಿದ್ದು ಅದರ ಸುತ್ತಮುತ್ತ ಯಾವುದೇ ಸ್ವಚ್ಛತೆ ಕಾಣುತ್ತಿಲ್ಲ ಹಾಗೂ ಆ ಕಟ್ಟಡಕ್ಕೆ ನಾಮಫಲಕ ಸಮೇತ ಇರುವುದಿಲ್ಲ, ಇದೇನು ಅಂಥ ಪ್ರಶ್ನಿಸಿದರೆ ಊರಿನವರೇ ಇದೆಲ್ಲಾ ನೋಡ್ಕೋಬೇಕು ಎಂದು ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ ಸೇಡಂ ತಾಲೂಕಿನ ಆರೋಗ್ಯ ಅಧಿಕಾರಿ, ಸ್ವಚ್ಛತೆಗೆ ಅನೇಕ ಬಾರಿ ಪಿಡಿಒ ಅವರಿಗೆ ಮನವಿ ಮಾಡಿದರೆ ಅವರು ಕ್ಯಾರೇ ಎನ್ನುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ, ಸ್ಥಳೀಯರು ಪಿಡಿಒ ಅವರಿಗೆ ಕೇಳಿದರೆ ಯಾರು ಕೂಡ ನಮ್ಮ ಗಮನಕ್ಕೆ ತಂದಿಲ್ಲ ಎಂದು ಉತ್ತರ ಕೊಡುತ್ತಿದ್ದಾರೆ ಗ್ರಾಮ ಪಂಚಾಯತ್ ಅಧಿಕಾರಿ, ಹಾಗಾದರೆ ಇಲ್ಲಿ ತಪ್ಪು ಯಾರದು ಎಂಬುದು ಗೊಂದಲ ಸೃಷ್ಟಿಸಿದೆ.
ಅದಿಕಾರಿಗಳು ಸರಿಯಾದ ಸಮಯಕ್ಕೆ ಬಾರದೆ ಸಾರ್ವಜನಿಕರಿಗೆ ಅತ್ಯಂತ ತೊಂದರೆ ಉಂಟಾಗಿದೆ, ಸಣ್ಣಪುಟ್ಟ ಸಮಸ್ಯೆಗಳು ಬಂದರೆ ಖಂಡೇರಾಯನಪಲ್ಲಿ ಇಲ್ಲವೇ ಮುಧೋಳ ಆಸ್ಪತ್ರೆಗಳಿಗೆ ಹೋಗುವಂಥ ಸ್ಥಿತಿ ಏರ್ಪಟ್ಟಿದೆ, ನಮ್ಮ ಗ್ರಾಮದಲ್ಲೇ ಸಾರ್ವಜನಿಕ ಆಸ್ಪತ್ರೆ ಇದ್ದರು ಸಹ ನಮಗೆ ಯಾವುದೇ ರೀತಿಯ ಪ್ರಯೋಜನ ಇಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಮಸ್ಯೆಗಳ ಕುರಿತು ತಾಲೂಕು ಅಧಿಕಾರಿಗಳಿಗೆ ಮಾಹಿತಿ ಕೇಳಿದರೆ ಹೌದು ಅವರು ಹೀಗೆ ನಡೆದುಕೊಳ್ಳುತ್ತಾರೆ ನೀವೇನಾದರೂ ಮಾಡಿಕೊಳ್ಳಿ ಎಂದು ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ, ಇಷ್ಟೊಂದು ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ಹಿಂದೆ ಕಾರಣಗಳು ಏನಿರಬಹುದು ಎಂಬ ಸಂಶಯುಂಟಾಗಿದೆ.
ಕೆಲ ರಾಜಕೀಯ ನಾಯಕರುಗಳ ಕೈಗೊಂಬೆಯಾಗಿ ವರ್ತನೆ ಮಾತಾಡುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ.
ಸಚಿವರಾಗಿರುವ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರ ಕ್ಷೇತ್ರದಲ್ಲೇ ಇಂತಹ ಪರಿಸ್ಥಿತಿ ಎದುರಾಗಿದೆ ಅಂದರೆ ರಾಜ್ಯದಲ್ಲಿ ಯಾವ ರೀತಿಯ ಅಧಿಕಾರ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಸಾರ್ವಜನಿಕರು.
ಇಷ್ಟು ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




