Ad imageAd image

ಶಿವಮೊಗ್ಗದಲ್ಲಿ CCTV ಕಣ್ತಪ್ಪಿಸಲು ನಂಬರ್‌ ಪ್ಲೇಟ್‌ ತೆಗೆಸಿದ್ದ, ಕೊನೆಗೆ ಕಟ್ಟಬೇಕಾಯ್ತು ಭಾರಿ ದಂಡ.

Bharath Vaibhav
WhatsApp Group Join Now
Telegram Group Join Now

ಶಿವಮೊಗ್ಗದಲ್ಲಿ CCTV ಕಣ್ತಪ್ಪಿಸಲು ನಂಬರ್‌ ಪ್ಲೇಟ್‌ ತೆಗೆಸಿದ್ದ, ಕೊನೆಗೆ ಕಟ್ಟಬೇಕಾಯ್ತು ಭಾರಿ ದಂಡ.

 

SHIMOGA : ಸಿಸಿಟಿವಿ ಕ್ಯಾಮರಾಗಳ ಕಣ್ತಪ್ಪಿಸುವ ಉದ್ದೇಶಕ್ಕೆ ನಂಬರ್‌ ಪ್ಲೇಟ್‌ (Number Plate) ಇಲ್ಲದೆ ಬೈಕ್‌ ಚಲಾಯಿಸುತ್ತಿದ್ದವನಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬೈಕ್‌ ಮಾಲೀಕನಿಗೆ 12 ಸಾವಿರ ರೂ. ದಂಡ ವಿಧಿಸಲಾಗಿದೆ.

 

ಶಿವಮೊಗ್ಗದಲ್ಲಿ ಪಶ್ಚಿಮ ಸಂಚಾರ ಠಾಣೆಯ ಪಿಎಸ್‌ಐ ತಿರುಮಲೇಶ್‌ ನೇತೃತ್ವದಲ್ಲಿ ಸಿಬ್ಬಂದಿ ಪ್ರವೀಣ್ ಪಾಟೀಲ್, ಸುರೇಶ್, ಪ್ರಶಾಂತ್, ಪ್ರಕಾಶ್ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆಗ ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ ತಡೆದು ತಪಾಸಣೆ ಮಾಡಿದ್ದರು. ಈ ವೇಳೆ ಬೈಕ್‌ ಅನ್ನು ಮಾರ್ಪಾಡು ಮಾಡಿರುವುದು ಬೆಳಕಿಗೆ ಬಂದಿತ್ತು. ಸವಾರ ಹೆಲ್ಮೆಟ್‌ ಕೂಡ ಧರಿಸಿರಲಿಲ್ಲ.

ವರದಿ:ಮಂಜುನಾಥ ರಜಪೂತ

WhatsApp Group Join Now
Telegram Group Join Now
Share This Article
error: Content is protected !!