ಸಿಂಧನೂರು:- 10,11:00 ಆದರೂ ಸರ್ಕಾರಿ ಆಸ್ಪತ್ರೆಗೆ ಬಾರದ ವೈದ್ಯರು ನಮ್ಮ ಕರ್ನಾಟಕ ಸೇನೆ ಇಂದ ದಿಡೀರನೆ ಪ್ರತಿಭಟನೆ ಸಪ್ಟೆಂಬರ್ 3 ಕರ್ತವ್ಯ ವೇಳೆ ಕರ್ತವ್ಯಕ್ಕೆ ಹಾಜರಾಗದ ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಬೇಜವಾಬ್ದಾರಿಯನ್ನು ಖಂಡಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ವೈದ್ಯ ಹಾಗೂ ಸಿಬ್ಬಂದಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಪಡಿಸಿದರು ಕಾರಣ ತಾಲೂಕಿನ ಸಿಂಗಾಪುರ್ ಗ್ರಾಮದ ಬಾಲಕನೂರ್ವನನ್ನು ಪೋಷಕರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು .
ಬೆಳಗ್ಗೆ 10 11:00 ಆದರೂ ಕೂಡ ಡ್ಯೂಟಿ ವೈದ್ಯರು ಬಾರದೆ ಇರುವುದರಿಂದ ಬಾಲಕನಿಗೆ ಚಿಕಿತ್ಸೆ ದೊರೆಯದ ಕಾರಣ ನೋವು ತಳಲಾರದೆ ಕಣ್ಣೀರ ಹಾಕುತ್ತಿರುವ ಬಗ್ಗೆ ಸಂಘಟನೆಯ ಮುಖಂಡ ಉಮೇಶ್ ಗೌಡ ಹರಳಹಳ್ಳಿ ಯವರು ಆಸ್ಪತ್ರೆಯ ಡ್ಯೂಟಿ ವೈದ್ಯರಾದ ಡಾಕ್ಟರ್ ಮಂಜುನಾಥ್ ಕಂಪ್ಲಿ ರವರಿಗೆ ಮೂರು ನಾಲ್ಕು ಬಾರಿ ಕರೆ ಮಾಡಿದರು ಕರೆ ಸ್ವೀಕರಿಸಲಿಲ್ಲ ತಕ್ಷಣ ಉಮೇಶ್ ಗೌಡರು ತಾಲೂಕು ಅಧ್ಯಕ್ಷರಾದ ಮಂಜುನಾಥ್ ಗಾಣಿಗೇರವರಿಗೆ ಮತ್ತು ಬೂದೇಶ ಜಿಲ್ಲಾ ಯುವ ಘಟಕ ಅಧ್ಯಕ್ಷರ ಅವರಿಗೆ. ಹುಸೇನ್ ಬಾಷಾ ಜಿಲ್ಲಾ ಸಂಚಾಲಕರು ಅವರಿಗೂ ಕರೆ ಮಾಡಿ ಆಸ್ಪತ್ರೆಗೆ ಬರಲು ಹೇಳಿದರು.
ಇವರೆಲ್ಲರೂ ಬಂದು ಆಸ್ಪತ್ರೆಯಲ್ಲಿ ನೋಡಿದಾಗ ಯಾರೊಬ್ಬ ವೈದ್ಯರು ಇಲ್ಲದಿರುವುದು ಕಂಡು ಬಂತು ಬಾಲಕ ಮತ್ತು ಕೆಲವು ರೋಗಿಗಳು ನೋವಿನಿಂದ ಬಳಲುತ್ತಿದ್ದರು ಕನಿಷ್ಠ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವೈದ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು ಪ್ರತಿನಿತ್ಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಬರುವ 500ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಯಲ್ಲಿನ ಸೌಲಭ್ಯ ಕೊರತೆಯಿಂದ ಪರದಾಡುವಂತಾಗಿದೆ 100 ಹಾಸಿಗೆ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ವೈದ್ಯರು ಹಾಗೂ ಸಿಬ್ಬಂದಿಗಳು ಕೊರತೆ ಇದೆ ಪ್ರತಿದಿನ 500ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಸೌಲಭ್ಯ ಮಾತ್ರ ಅಷ್ಟಕಷ್ಟೇ ಎನ್ನುವಂತಾಗಿದೆ ಆಸ್ಪತ್ರೆಯ ಮೂಲಿ ಯೊಂದರ ಕೊಠಡಿಯಲ್ಲಿ ಲ್ಯಾಬ್ ಇದೇ ಹೆಸರಿಗಟ್ಟಿ ಪ್ರಯೋಗಾಲಯ ಆದರೆ ನಿತ್ಯ ಚಿಕಿತ್ಸೆ ಬರುವ ಶೇ% 90ರಷ್ಟು ರೋಗಿಗಳಿಗೆ ಇಲ್ಲಿ ರಕ್ತ ಪರೀಕ್ಷೆ ಮಾತ್ರ ಮಾಡುತ್ತಿದ್ದಾರೆ.
ಉಳಿದಂತೆ ಯಾವ ಪರೀಕ್ಷೆಗಳನ್ನು ಕೂಡ ಮಾಡುತ್ತಿಲ್ಲ ನಗರದಲ್ಲಿ ನಾಯಿ ಕೊಡೆಗಳಂತೆ ತಲೆಯೆತ್ತಿರುವ ಖಾಸಗಿ ಪ್ರಯೋಗಗಳು ದುಪ್ಪಟ್ಟು ಹಣ ತೆತ್ತುತ್ತಿವೆ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ. ಬಡ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಿದ್ದು ಇಲ್ಲದಂತಾಗಿದೆ ಆಸ್ಪತ್ರೆಯಲ್ಲಿ ಈಗಿರುವ ವೈದ್ಯರ ಜೊತೆಗೆ ಇನ್ನಷ್ಟು ವೈದ್ಯರು- ಸಿಬ್ಬಂದಿಗಳ ಅಗತ್ಯವಿದ್ದು ಐಸಿಯು ವಿಭಾಗಕ್ಕೆ ಸಿಬ್ಬಂದಿಗಳ ಕೊರತೆ ಇದೆ ತಜ್ಞರು ವೈದ್ಯರು ಇದ್ದರೂ ಕೂಡ ಇಲ್ಲದಂತಾಗಿದೆ ರೋಗಿಗಳು ಚಿಕಿತ್ಸೆಗೆ ಬಂದಾಗ ವೈದ್ಯರು ಲಭ್ಯವಿರುವುದಿಲ್ಲ ಯಾಕೆಂದರೆ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ತಮ್ಮ ಸ್ವಂತ ಖಾಸಗಿ ಕ್ಲಿನಿಕ್‌ನಲ್ಲಿ ಲಭ್ಯುವಿರುತ್ತಾರೆ.’
ಇದು ಸಾರ್ವಜನಿಕರ ವಾದವಾಗಿದೆ ಇದರಿಂದ ರೋಗಿಗಳಿಗೆ ಗರ್ಭಿಣಿ ಸ್ತ್ರೀಯರಿಗೆ ತುರ್ತು ಚಿಕಿತ್ಸೆ ಸಿಗುತ್ತಿಲ್ಲ ಎಂದು ಸಂಘಟನೆಕಾರರು ಸರ್ಕಾರಿ ಆಸ್ಪತ್ರೆ ಮುಂದೆ ದಿಡೀರನೆ ಪ್ರತಿಭಟನೆ ನಡೆಸಿದರು ಮುಖ್ಯ ವೈದ್ಯಾಧಿಕಾರಿಗಳಾದ ಡಾ// ಹನುಮಂತ ರೆಡ್ಡಿ ಅವರು ಪೋಲಿಸರ ಸಮಕ್ಷಮದಲ್ಲಿ ಮಧ್ಯಪ್ರವೇಶಿಸಿ ಸಂಘಟನೆ ಕಾರರನ್ನು ಮನವೊಲಿಸಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ – “ನಮ್ಮ ಕರ್ನಾಟಕ ಸೇನೆ”ಯ ಕಾರ್ಯಕರ್ತರಾದ — ಉಮೇಶ್ ಗೌಡ ಹರಳಹಳ್ಳಿ ರಾಜ್ಯ ಕಾರ್ಯಧ್ಯಕ್ಷರು.. ಮಂಜುನಾಥ್ ಗಾಣಿಗೇರ್ ತಾಲೂಕ ಅಧ್ಯಕ್ಷರು.. ಬೂದೇಶ್ ಜಿಲ್ಲಾ ಯುವ ಘಟಕದ ಅಧ್ಯಕ್ಷರು.. ಹುಸೇನ್ ಬಾಷಾ ಜಿಲ್ಲಾ ಸಂಚಾಲಕರು.. ರಾಘವೇಂದ್ರ ಜಿಲ್ಲಾ ಉಪಾಧ್ಯಕ್ಷರು.. ಯಮನೂರ್ ಗೌಡ ತಾಲೂಕ ಕಾರ್ಮಿಕ ಘಟಕ ಅಧ್ಯಕ್ಷರು.. ಪ್ರಶಾಂತ್ ಕುಮಾರ್ ನಗರ ಘಟಕ ಪ್ರ ಕಾರ್ಯದರ್ಶಿ.. ರಾಘು ಅಲ್ಲಲ್ಕರ್.. ಗದ್ದಪ್ಪ ತಾಲೂಕು ಉಪಾಧ್ಯಕ್ಷರು.. ಪ್ರಯಾಬ್.. ಸಲ್ಮಾನ್. ಶರೀಫ್.. ಇನ್ನಿತರರು ಇದ್ದರು
ವರದಿ :-ಬಸವರಾಜ ಬುಕ್ಕನಹಟ್ಟಿ