ಚಿಕ್ಕೋಡಿ ;-ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸುಮಾರು 70% ರಷ್ಟು ಹಣ ಹಂಚಿಕೆ ಮಾಡಿದ್ದು ಇರುತ್ತಾರೆ ಇನ್ನುಕೆಲ ಜನರಿಗೆ ಸುಮಾರು 30%ಹಣ ಹಂಚಿಕೆ ಆಡಬೇಕಾಗಿತ್ತು ಸ್ಥಳಕ್ಕೆ ಮಾಧ್ಯಮ ಪ್ರತಿನಿಧಿ ಬೇಟಿ ನೀಡಿದ್ದರಿಂದ ಹಣ ಹಂಚಿಕೆ ಮಾಡಲು ಆಗಿಲ್ಲ ಕಾರಣ ಯಾರಿಗೆ ಬೇರೆ ಬೇರೆ ದೂರಿನ ಉರಿನವರಿಗೆ ಮತದಾನ ಮಾಡಲು ಬರಲು ಹೇಳಿ ಅವರಿಗೆ ಪ್ರೈವೇಟ್ ಗಾಡಿಗಳ ತೆಗೆದುಕೊಂಡು ಬಂದರು ಖರ್ಚನ್ನು ನೀಡಿಲ್ಲದ ಕಾರಣ ಹಣ ಮುಟ್ಟಿಲ್ಲ ಅಂತಹ ಜನರು ಬಿಜೆಪಿ ಕಾರ್ಯಕರ್ತರ ವಿರುದ್ದ ಮಾಧ್ಯಮದವರಿಗೆ ಎಲ್ಲೆಲ್ಲಿ ಎಷ್ಟು ರೂಪಾಯಿಗಳನ್ನು ಹಂಚಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ನಿಪ್ಪಾಣಿ ಶಹರದಲ್ಲಿ ಕೂಡಾ ಮುನಿಸಿಪಾಲ್ ಹೈ ಸ್ಕೂಲ್ ನಲ್ಲಿ ಕೆಲ ವೇಳೆ ಗೊಂದಲದ ವಾತಾವರಣ ನಿರ್ಮಾಣ ಗೊಂಡಿತ್ತು ಮತದಾನ ಮಾಡಲು ಬಟನ್ ಒತ್ತಿದಲ್ಲಿ 2 ಸಲ ಮತದಾನ ಆಗುತ್ತಿದೆ ಎಂದು ವೋಟ ಮಾಡಲು ಬಂದ ಯುವಕರಿಂದ ಹಾಗೂ ಸ್ತಳೀಯ ನಾಗರಿಕ ರೊಂದಿಗೆ ಚುನಾವನಾ ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ವಾದ ವಿವಾದ ನಡೆದವು ಚುನಾವಣೆ ಅಧಿಕಾರಿ ಅವರಿಗೆ ತಿಳಿಸಿ ಹೇಳಿ ಸ್ಥಳಕ್ಕೆ ತಹಶೀಲ್ದಾರ್ ಬೇಟಿ ನೀಡಿ ಪರಿಶೀಲಿಸಿದರು ಹಾಗು ನಿಪ್ಪಾಣಿ ಶಹರ ಪೋಲಿಸ ಠಾಣೆ ಪಿಎಸ್ಐ ಜೊತೆ ಮಾತಿನ ಚಕಮಕಿಗೆ ಕಾರಣವಾಯಿತು ಅವರು ಕೂಡ ಮತದಾರರಿಗೆ ತಿಳಿವಳಿಕೆ ನೀಡಿ ವಾತಾವರಣ ಶಾಂತ ಗೊಳಿಸಿದರು.
ಬೆಳಿಗ್ಗೆ 11 ಗಂಟೆ ನಂತರ ಮತದಾನ ಕಡಿಮೆ ಆಗಿದ್ದು ಬಿಸಿಲು ಕಡಿಮೆ ಆಗುತ್ತಲೇ ಮತದಾನ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ವರದಿ ರಾಜು ಮುಂಡೆ