ಬೆಳಗಾವಿ: ಕಳೆದ 11 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದಿಂದಾಗಿ ದೇಶದಲ್ಲಿ ಕಡು ಬಡವರ ಸಂಖ್ಯೆ36 ಕೋಟಿಯಿಂದ 7.5 ಕೋಟಿಗೆ ಇಳಿದಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊದಲು ಶೇ.27 ರಷ್ಟು ಇದ್ದ ಕಡು ಬಡವರ ಸಂಖ್ಯೆ ಇಂದು ಶೇ. 5.3 ಕ್ಕೆ ಇಳಿದಿದೆ ಎಂದು ಶೆಟ್ಟರ್ ಹೇಳಿದರು.
ಸ್ಟಾಟ್ ಅಪ್ ಇಂಡಿಯಾ , ಮೇಕ್ ಇನ್ ಇಂಡಿಯಾ ಹೀಗೆ ಹಲವಾರು ಜನಪ್ರೀಯ ಯೋಜನೆಗಳನ್ನು ಹಮ್ಮಿಕೊಂಡು ಪ್ರದಾನಿ ಮೋದಿ ವರು ಬಡವರಿಗೆ ಉದ್ಯೋಗ ಕಲ್ಪಿಸಿದ ಕಾರಣ ಬಡತನ ಕಡಿಮೆಯಾಗಿದೆ ಎಂದು ಸಂಸದರು ತಿಳಿಸಿದರು.




