Ad imageAd image

ಭವಿಷ್ಯದಲ್ಲಿ ಹೆಣ್ಣು ಮಕ್ಕಳೇ ದೇಶ ಆಳುವವರು: ಡಾ. ಮಲ್ಲಮ್ಮ ಯಾಳವಾರ

Bharath Vaibhav
ಭವಿಷ್ಯದಲ್ಲಿ ಹೆಣ್ಣು ಮಕ್ಕಳೇ ದೇಶ ಆಳುವವರು: ಡಾ. ಮಲ್ಲಮ್ಮ ಯಾಳವಾರ
WhatsApp Group Join Now
Telegram Group Join Now

ಬಸವನ ಬಾಗೇವಾಡಿ : ಪಟ್ಟಣದ ಜನನಿ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವು ಪಟ್ಟಣದಲ್ಲಿ ಮಂಗಳವಾರ ಜರುಗಿತು. ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ವಿಜಯಪುರದ ಚೇತನ ಮಹಿಳಾ ಬ್ಯಾಂಕಿನ ಅಧ್ಯಕ್ಷೆ ಡಾ. ಮಲ್ಲಮ್ಮ ಯಾಳವಾರ ಮಾತನಾಡಿ, ಭವಿಷ್ಯದಲ್ಲಿ ಮಹಿಳೆಯರೇ ದೇಶವನ್ನಾಳುವವರು ಹಾಗೂ ಕಟ್ಟುವವರು. ಹೀಗಾಗಿ ಹೆಣ್ಣು ಮಕ್ಕಳೇ, ಹೀಗಾಗಿ ಪೋಷಕರು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಪುರುಷರಷ್ಟೇ ಮಹಿಳೆಯರಿಗೂ ಕೂಡ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆ ತೆರೆದ ಮಾಲಿ ಪಾಟೀಲ ದಂಪತಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಡಾ. ಭುವನೇಶ್ವರಿ ಮಾತನಾಡಿ ಇಂದು ಪಾಲಕರು ಮಕ್ಕಳಿಗೆ ಜಂಕ್ಫುಡ್ ಕೊಡದಂತೆ ಮಕ್ಕಳ ಆರೋಗ್ಯದ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ವಿಶ್ವನಾಥರೆಡ್ಡಿ ಮಾಲಿಪಾಟೀಲ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಹುಟ್ಟು ಹಾಕಿದ ಸಂಸ್ಥೆಗೆ ಪಾಲಕರ ಸಹಕಾರದ ಪಲವಾಗಿ ಇಂದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಗಳಿಸಲು ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕಾವ್ಯಾ ಮಾಲಿಪಾಟೀಲ, ಉಪಾಧ್ಯಕ್ಷ ಸಾಹೇಬಗೌಡ ದೊಡಮನಿ ಸೇರಿದಂತೆ ಅನೇಕರು ಇದ್ದರು. ಈ ಸಂದರ್ಭದಲ್ಲಿ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ನಂತರ ಮಕ್ಕಳಿಂದ ನಡೆದ ಸಂಸ್ಕೃತಿಕ ಕಾರ್ಯಕ್ರಮಗಳು ಪಾಲಕರ ಮನಸೂರಿಗೊಂಡಿತು.

ವರದಿ:ಗುರುರಾಜ್ ಬಿ ಕನ್ನೂರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!