Ad imageAd image

70 ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಕನ್ನಡ ಚಿತ್ರ ರಂಗಕ್ಕೇ ಒಟ್ಟು 7ಪ್ರಶಸ್ತಿಗಳು.

Bharath Vaibhav
70 ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಕನ್ನಡ ಚಿತ್ರ ರಂಗಕ್ಕೇ ಒಟ್ಟು 7ಪ್ರಶಸ್ತಿಗಳು.
WhatsApp Group Join Now
Telegram Group Join Now

ಬೆಳಗಾವಿ :-70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ ಇಂದು ಪ್ರಕಟವಾಗಿದ್ದು, ಕನ್ನಡ ಚಿತ್ರರಂಗಕ್ಕೆ ಒಟ್ಟು 7 ಪ್ರಶಸ್ತಿಗಳು ಒಲಿದು ಬಂದಿದ್ದು ಕನ್ನಡಿಗರಿಗೆಲ್ಲ ಹೆಮ್ಮೆಯ ಸಂಗತಿ.

ಇಡೀ ದೇಶದ ಗಮನ ಸೆಳೆದಿದ್ದ ಕಾಂತಾರ ಹಾಗೂ ಕೆಜಿಎಫ್-2 ಚಿತ್ರಗಳಿಗೆ ತಲಾ 2 ಪ್ರಶಸ್ತಿಗಳು ಬಂದಿದ್ದು, ಎರಡೂ ಚಿತ್ರ ತಂಡಗಳಿಗೆ ಅಭಿನಂದನೆಗಳು. ಕಾಂತಾರ ಚಿತ್ರದ ನಟನೆಗೆ ರಾಷ್ಟ್ರ ಮಟ್ಟದ ನಾಯಕ ನಟ ಪ್ರಶಸ್ತಿಗೆ ಭಾಜನರಾಗಿರುವ ರಿಷಬ್ ಶೆಟ್ಟಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಕನ್ನಡದ ಮಧ್ಯಂತರ ಚಿತ್ರಕ್ಕೂ 2 ಹಾಗೂ ರಂಗವಿಭೋಗ ಚಿತ್ರಕ್ಕೆ 1 ಪ್ರಶಸ್ತಿ ಬಂದಿವೆ. ಈ ಎಲ್ಲಾ ಚಿತ್ರ ತಂಡಗಳಿಗೆ ಅಭಿನಂದನೆಗಳು. ನಿಮ್ಮ ವೃತ್ತಿ ಬದ್ಧತೆ, ಕಲಾ ಕೌಶಲ್ಯ ಕನ್ನಡ ಚಿತ್ರರಂಗವನ್ನು ಮತ್ತಷ್ಟು ಸಮೃದ್ಧಗೊಳಿಸಲಿ. ಪ್ರಸ್ತುತ, ಮೋಡ ಕವಿದಂತಿರುವ ಕನ್ನಡ ಚಿತ್ರರಂಗಕ್ಕೆ ಈ ಪ್ರಶಸ್ತಿಗಳು ಸೂರ್ಯನ ಬೆಳಕಿನ ಕಿರಣಗಳಾಗಲಿ, ಚಂದನವನ ಮತ್ತೆ ಪುಟಿದೆದ್ದು ನಿಲ್ಲಲಿ; ಮತ್ತಷ್ಟು ಸಮೃದ್ಧಗೊಳ್ಳಲಿ ಎಂದು ಆಶಿಸುತ್ತೇನೆ.

ವರದಿ:- ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!