Ad imageAd image

ದೇವರ ಹೆಸರಿನಲ್ಲಿ ಶಾಲಾ ಜಾಗ ಅತಿಕ್ರಮಣ.! ಕಟ್ಟಡ ನಿರ್ಮಾಣ ತೆರವುಗೊಳಿಸಿದ ಪೊಲೀಸ್ ಪಡೆ.!

Bharath Vaibhav
ದೇವರ ಹೆಸರಿನಲ್ಲಿ ಶಾಲಾ ಜಾಗ ಅತಿಕ್ರಮಣ.! ಕಟ್ಟಡ ನಿರ್ಮಾಣ ತೆರವುಗೊಳಿಸಿದ ಪೊಲೀಸ್ ಪಡೆ.!
WhatsApp Group Join Now
Telegram Group Join Now

ಸಿಂಧನೂರು :– ರಾಯಚೂರು ನಗರದ ಚಂದ್ರ ಬಂಡಾ ರಸ್ತೆಯ ಎಲ್ ಬಿ ಎಸ್ ಬಡಾವಣೆ ಸಂತೋಷ್ ನಗರದಲ್ಲಿ ಸರ್ಕಾರಿ ಪ್ರೌಢ ಶಾಲೆಗೆ ಮೀಸಲಿಸಿದ ಜಾಗವನ್ನು ದೇವರ ಹೆಸರಿನಲ್ಲಿ ಅತಿಕ್ರಮಣವಾಗಿ ಕಟ್ಟಡ ನಿರ್ಮಿಸಿದ ಜಾಗವನ್ನು ಮಂಗಳವಾರ ಮಧ್ಯರಾತ್ರಿ ಪೊಲೀಸ್ ಬಿಗಿ ಬಂದೋಬಸ್ತ್ತಿನಲ್ಲಿ ರಾತ್ರಿಯಿಡಿ ಕಾರ್ಯಚರಣೆ ನಡೆಸಿ ತೆರವು ಗೊಳಿಸಿದ ನಗರ ಸಭೆ ಮೂರು ಕ್ರೇನ್ ಬಳಸಿ ಇಟ್ಟಗಿಯಿಂದ ನಿರ್ಮಿಸಿದ ಶೆಡ್ ಅನ್ನು ತೆರವು ಮಾಡಿದರು.

ಶಾಲಾ ಜಾಗದಲ್ಲಿ ಇಟ್ಟಿದ್ದ ನಾಗರಮೂರ್ತಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು ಎನ್ನಲಾಗಿದೆ ಸಂತೋಷ್ ನಗರ ಸರ್ವೇ ನಂಬರ್- 784/1ರಲ್ಲಿ ಶಾಲಾ ಕಟ್ಟಡಕ್ಕೆ ಮೀಸಲಾಗಿಡಲಾಗಿದ್ದ1017 ಚದುರ ಮೀಟರ್ ಗಿಂತ ಅಧಿಕ ಶಾಲಾ ಜಾಗವನ್ನು ಬಡಾವಣೆಯ ಕೆಲವು ಪಟ್ಟಭದ್ರ ವ್ಯಕ್ತಿಗಳು ಈ ಜಾಗದಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ ಅಕ್ರಮವಾಗಿ ಟಿನ್ ಶೆಡ್ ನಿರ್ಮಾಣ ಮಾಡಿದ್ದಾರೆ ಅದಕ್ಕೆ ದೇವಸ್ಥಾನ ಮತ್ತು ದೇವರ ಸ್ವರೂಪವನ್ನು ನೀಡಿ ದೇವರ ಹೆಸರಿನಲ್ಲಿ ಸರ್ಕಾರಿ ಜಾಗವನ್ನು ಕಬಳಿಸುವ ಹುನ್ನಾರ ಮಾಡಿದ್ದಾರೆ.

ಕನ್ನಡ ಶಾಲೆ ಉಳಿಸಿ ಹೋರಾಟ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇಂದು ಕಟುಬದ್ಧವಾಗಿ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಿದರು ಇಂದು ಸಂತೋಷ್ ನಗರ ಬಡಾವಣೆಯ ಆಕ್ರಮ ಕಟ್ಟಡ ತೆರವುಗೊಳಿಸಿ ಶಾಲೆಯ ಕಟ್ಟಡ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದೆ ಹೋರಾಟಗಾರರು ಕಳೆದ ಒಂದುವರೆ ವರ್ಷದಿಂದ ನಿರಂತರ ನಡೆಸಿದ ಪ್ರತಿಭಟನೆ ಇಂದು ಕೊನೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು,

 ವರದಿ:- ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!