ಬೆಂಗಳೂರು: ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಹಮ್ಮಿಕೊಂಡಿದ್ದ “ವೀರ ಶೈವ ಲಿಂಗಾಯತರ ಮಹಾ ಸಂಗಮ” ಪೂರ್ವಭಾವಿ ಸಿದ್ಧತಾ ಮಹಾಸಭೆಯಲ್ಲಿ ನೆಲಮಂಗಲ ಬಸವಣ್ಣ ದೇವರ ಮಠದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿ ಜೀ ,ಮಾಜಿ ಸಚಿವ ರೇಣುಕಾಚಾರ್ಯ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ರಾಮನಗರ ಜಿಲ್ಲಾ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ಯುವ ನಾಯಕ ರುದ್ರೇಶ್, ಮಾಜಿ ಶಾಸಕ ಡಿ.ಎಸ್ ಸುರೇಶ್, ಜಿ. ರಾಜೇಂದ್ರ, ದಾಸರಹಳ್ಳಿ ವೀರ ಶೈವ ಲಿಂಗಾಯತ ಯುವ ಮುಖಂಡ ಪುಟ್ಟಸ್ವಾಮಿ, ಕಾಯಕ ಯೋಗಿ ವೇದಿಕೆಯ ಅಧ್ಯಕ್ಷ ಬಸವರಾಜಣ್ಣ, ನಿರಂಜನ್ ಕುಮಾರ್, ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾ ಸಭಾದ ಸಂಸ್ಥಾಪಕ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಬಿ, ಇವರುಗಳ ಸಮ್ಮುಖದಲ್ಲಿ ವೀರ ಶೈವ ಲಿಂಗಾಯತ ಸಮಾಜದ ಮಹಾ ಸಂಗಮ ಸಭೆ ನಡೆಯಿತು.

ಬಿ.ಜೈ. ವಿಜಯೇಂದ್ರ ಹಾಗೂ ರಾಜಾಹುಲಿ ರೈತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸಿ ವೀರ ಶೈವ ಲಿಂಗಾಯತ ಮಹಾ ಸಂಗಮ ಸಭೆ ಆಯೋಜಿಸಲಾಗುವುದು ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದರು.
ಬೆಂಗಳೂರು ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಹಮ್ಮಿಕೊಂಡಿದ್ದ ಚಾಮರಾಜನಗರ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ ಜಿಲ್ಲೆಗಳ ವೀರ ಶೈವ ಲಿಂಗಾಯತರ ಮಹಾ ಸಂಗಮ ಪೂರ್ವಭಾವಿ ಸಭೆ ನಡೆಯಿತು ನಂತರ ಮಾಧ್ಯಮದವರೊಂದಿಗೆ ತಿಳಿಸಿದರು.
ಯಡಿಯೂರಪ್ಪ ಅವರು ವೀರ ಶೈವ ಲಿಂಗಾಯತ ಸಮುದಾಯದ ಧೀಮಂತ ಹಿರಿಯ ನಾಯಕರು ಅವರನ್ನು ಗೌರವಿಸುವ ನಿಟ್ಟಿನಲ್ಲಿ ದಾವಣಗೆರೆಯಲ್ಲೇ ವ್ಯಕ್ತವಾಗಿದೆ. ಮತ್ತು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗಗಳಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ರಾಜ್ಯ ಸರ್ಕಾರದಿಂದ ‘ಜಾತಿ ಗಣತಿ’ ನಡೆಸುವಾಗ ನಮ್ಮ ವೀರ ಶೈವ ಲಿಂಗಾಯತರ ಸಮುದಾಯದ ಮನೆಗಳಿಗೆ ಯಾರು ಭೇಟಿ ನೀಡಿಲ್ಲಾ ಆದರೆ ವರದಿಯಲ್ಲಿರುವ ಅಂಕಿ – ಅಂಶಗಳು (ಭೊಗಸ್ ಆಗಿದ್ದು) ಸುಳ್ಳಾಗಿದ್ದು. ನಮ್ಮ ಜನ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ನಮ್ಮ ಸಮಾಜದಲ್ಲಿ ಹಲವರು ಇನ್ನೂ ಬಡವರಾಗಿಯೇ ಇದ್ದಾರೆ ಆದ್ದರಿಂದಲೇ ವೀರ ಶೈವ ಲಿಂಗಾಯತರನ್ನು ಓಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ನೆಲಮಂಗಲ ಬಸವ ದೇವರ ಮಠ, ನೆಲಮಂಗಲ ಕುಲುಮೆ ಮಠ, ವಿಜಯಪುರದ ಬಸವ ಕಲ್ಯಾಣ ಮಠ, ಕೋಲಾರದ ಬೆಳ್ಳಾವಿ ಮಠದ ಸ್ವಾಮಿಗಳು ಮತ್ತು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವೀರ ಶೈವ ಲಿಂಗಾಯತ ಸಮಾಜದ ಮುಖಂಡರು ಮಹಿಳೆಯರು ಯುವಕರು ಮುಂತಾದವರು ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




