ಚಿಕ್ಕೋಡಿ :ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದ ಉದ್ಯಮಿಗಳ ಪ್ರಕಾರ, ಗುರುವಾರ ಮತ್ತು ಭಾನುವಾರದಂದು ವಾರದ ಮಾರುಕಟ್ಟೆ ದೊಡ್ಡಮಾತ್ರದಲ್ಲಿ ಕಾಯಿಪಲ್ಲೆ ಹಣ್ಣು ಹಂಪಲು ವ್ಯಾಪಾರ ನಡೆಯುತ್ತದೆ.

ಇಂತಹ ಸಂದರ್ಭದಲ್ಲಿ ಗುತ್ತಿಗೆದಾರರು, ತೆರಿಗೆ ಸಂಗ್ರಹಿಸುವ ಕೆಲಸವನ್ನು ಈ ಎರಡು ದಿನಗಳಲ್ಲಿ ಮಾತ್ರ ಮಾಡಲಾಗುತ್ತದೆ.
ನಗರಸಭೆಯು ಸುರಕ್ಷಿತ ಮತ್ತು ವ್ಯವಸ್ಥಿತ ವ್ಯವಹಾರಕ್ಕಾಗಿ ಮಾರುಕಟ್ಟೆಗಳಿಗೆ ಒಪ್ಪಂದದ ಮೇಲೆ ಗುತ್ತಿಗೆದಾರರಿಗೆ ಜಕಾತಿ ವಸುಲಾತಿ ಕೆಲಸ ನೀಡಿದೆ, ಇದರಿಂದಾಗಿ ಆದಾಯವನ್ನು ಸಂಗ್ರಹಿಸಬಹುದು ಮತ್ತು ಈ ಮೊತ್ತದಿಂದ ಪ್ರದೇಶದ ಉತ್ತಮ ಅಭಿವೃದ್ಧಿಯನ್ನು ಮಾಡಬಹುದು. ಸೌಲಭ್ಯಗಳನ್ನು ಸಹ ಒದಗಿಸಬಹುದು.
ಆದರೆ ಗುತ್ತಿಗೆದಾರರು ಒಪ್ಪಂದದ ನೆಪದಲ್ಲಿ ಅನಿಯಂತ್ರಿತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಂಗೊಳ್ಳಿ ರಾಯಣ್ಣ ಘರ್ಜನೆ ಸಂಘಟನೆಯವರು ಸಂಜು ಬಡಿಗೇರ್, ಸಂತೋಷ್ ಪೂಜಾರಿ, ಸಮಾಜ ಸೇವಕರಾದ ಚಂದ್ರಕಾಂತ್ ಹುಕ್ಕೇರಿ, ಇವರ ನೇತೃತ್ವದಲ್ಲಿ ರೈತರು ಮತ್ತು ವ್ಯಾಪಾರಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಗುರುವಾರ ನಡೆದ ವಾರದ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಂದ ಬಲವಂತವಾಗಿ 50, 40, 30,ರೂ. ವಸೂಲಿ ಮಾಡಲಾಗುತ್ತಿದೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.
ಇದೇ ವಿಷಯ ಕುರಿತು ನಮ್ಮ ವಾಹಿನಿಯೊಂದಿಗೆ ಸಂಘಟನೆ ಮುಖಂಡರು ಮಾತನಾಡಿದ್ದಾರೆ.
ಮಾರುಕಟ್ಟೆಯಲ್ಲಿ ಯಾವುದೇ ಮೂಲ ಸೌಲಭ್ಯಗಳನ್ನು ಒದಗಿಸಲಾಗಿಲ್ಲ. ಗುತ್ತಿಗೆ ಪಡೆದ ಗುತ್ತಿಗೆದಾರರು ಜಕಾತಿ ಹೆಸರಿನಲ್ಲಿ ರೈತರು ಮತ್ತು ವ್ಯಾಪಾರಿಗಳನ್ನು ಲೂಟಿ ಮಾಡುತ್ತಿದ್ದಾರೆ. ಒಪ್ಪಂದವನ್ನು ತಕ್ಷಣ ರದ್ದುಗೊಳಿಸುವಂತೆ ಕರವೇ ಸಂಘದ ಮುಖಂಡರು ತಾಲೂಕ ಆಡಳಿತವನ್ನು ಒತ್ತಾಯಿಸಿದ್ದಾರೆ.
ವರದಿ: ರಾಜು ಮುಂಡೆ




