ಚಿಕ್ಕೋಡಿ : ಇಂಗಳಿ ಗ್ರಾಮದಲ್ಲಿಯ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಅತ್ಯಂತ ಶ್ರದ್ಧೆ ಭಕ್ತಿಯಿಂದ ಸಂತ ನಾಮದೇವ ಮಹಾರಾಜರ ಪುಣ್ಯತಿಥಿ ಜರುಗಿತು. ಬೆಳಿಗ್ಗೆ ಗ್ರಾಮದ ವಿಠ್ಠಲ್ ರುಕ್ಮಿಣಿ ಮಂದಿರದಿಂದ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ದಿಂಡಿ ಹೊರಡಿಸಲಾಗಿತ್ತು ಗ್ರಾಮದ ಅಗಸೆಯಿಂದ ಶಿರಹಟ್ಟಿಗಲ್ಲಿ, ಹನುಮಾನ ಸಂಸ್ಥೆಗಲ್ಲಿ, ಮುಖ್ಯರಸ್ತೆಯಿಂದ ವಿಠ್ಠಲ್ ರುಕ್ಮಿಣಿ ಮಂದಿರವರಿಗೆ ಆಗಮಿಸಿತು.
ದಿಂಡಿ ವೇಳೆಗೆ ಭಕ್ತರಿಂದ ಹಾಲು ಮೊಸರು ಸಂಗ್ರಹಿಸಲಾಗಿತ್ತು. ಸದರಿ ಹಾಲು ಮೊಸರು ಕೂಡಿಸಿ ಮಟಕಿ ಯಲ್ಲಿ ಹಾಕಿ ಮಟಕಿ ಒಡೆಯುವ ಕಾರ್ಯಕ್ರಮ ಜರುಗಿತು. ತದನಂತರ ಸಾಯಂಕಾಲ ವಾರಕರಿ ಭಕ್ತರಿಂದ ಭಜನೆ, ವಿಠಲ ನ ಭಕ್ತಿಗೀತೆಗಳ ಸಂಭ್ರಮದಲ್ಲಿ ಭಕ್ತರಿಂದ ನೃತ್ಯ, ಫುಗಡಿ, ಖೋ ಖೋ ಆಟಗಳು ನಡೆದವು.
ಈ ಸಂಧರ್ಭ ದಲ್ಲಿ ಮಕ್ಕಳು ಗೋಪಾಲ ನ ಅನೇಕ ರೂಪಗಳಲ್ಲಿ ವಸ್ತ್ರ ಧರಿಸಿ ಕಣ್ಮನ ಸೆಳೆದರು. ಇದೇ ವೇಳೆ ವಿಠಲ್ ರುಕ್ಮಿಣಿಯ ಮಂದಿರದ ಜೀರ್ಣೋದ್ಧಾರ ಕಾಮಗಾರಿ ಗೆ ಚಾಲನೆಯನ್ನು ನೀಡಲಾಯಿತು. ಅಶೋಕ ಜೋಶಿ, ಅರ್ಜುನ ಗೌoಡಿ, ಅಣ್ಣಾಸಾಹೇಬ ಗಾವಡೆ, ಸುಭಾಷ್ ಜಾಧವ, ಋಷಿಕೇಶ್ ಜಾಧವ, ವಸಂತ ಕವಾಳೆ, ಕುಶಾಪ್ಪಾ ಅಂಬಿ, ಹೂವನ್ನಾ ಚೌಗುಲೆ, ಸೋಪಾನ ಅಂಬೇಕರ ದತ್ತಾ ಲೋಹಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ : ಮಹಾವೀರ ಚಿಂಚಣೆ.




