Ad imageAd image

ಒಟ್ಟು ಕರ್ನಾಟಕದಲ್ಲಿ 28 ಸೀಟುಗಳನ್ನು ಗೆಲ್ಲೇ ಗೆಲ್ಲುತ್ತೇವೆ ಅಬಕಿ ಬಾರ್ ಚಾರಸೋ ಪಾರ

Bharath Vaibhav
ಒಟ್ಟು ಕರ್ನಾಟಕದಲ್ಲಿ 28 ಸೀಟುಗಳನ್ನು ಗೆಲ್ಲೇ ಗೆಲ್ಲುತ್ತೇವೆ ಅಬಕಿ ಬಾರ್ ಚಾರಸೋ ಪಾರ
WhatsApp Group Join Now
Telegram Group Join Now

ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಇಂದು ಬೆಳಗಾವಿ ನಗರದಲ್ಲಿ ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಜಿ ಯವರ ನೇತೃತ್ವದಲ್ಲಿ ನಡೆದ ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ,ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಪಾಲ್ಗೊಂಡು ಮಾತನಾಡಿದರು.

ಸಮಾವೇಶದಲ್ಲಿ ಚಿಕ್ಕೋಡಿ, ಬೆಳಗಾವಿ ಸೇರಿದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು ವಿಕಸಿತ ಭಾರತಕ್ಕಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದಾಗ, ಭಾರತ ಮಾತಾ ಕಿ ಜೈ ಘೋಷಣೆಯೊಂದಿಗೆ ಮುಗಿಲು ಮುಟ್ಟಿತು. ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರು ಭಾರತದ ಚಿತ್ರಣವನ್ನೇ ಬದಲಿಸಿದ್ದು, ಮತ್ತೊಮ್ಮೆ ಮೋದಿ ಅವರೇ ದೇಶದ ಪ್ರಧಾನಿ ಆಗಬೇಕು ಎನ್ನುವುದು ನಮ್ಮೆಲ್ಲ ಕಾರ್ಯಕರ್ತರ ಒಮ್ಮತದ ಅಭಿಮತ.

ಈ ಸಂದರ್ಭದಲ್ಲಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಜಿ,ಸಂಸದರು, ವಿಧಾನ ಪರಿಷತ್ ಸದಸ್ಯರು,ಹಾಲಿ ಮಾಜಿ ಶಾಸಕರು, ಬಿಜೆಪಿ-ಜೆಡಿಎಸ್ ಪಕ್ಷಗಳ ನಾಯಕರು,ಪದಾಧಿಕಾರಿಗಳು, ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!