Ad imageAd image

ಉಡುಪಿಯಲ್ಲಿ ಹೇಯ ಕೃತ್ಯ : ಮೀನು ಕದ್ದಿರುವ ಆರೋಪದಲ್ಲಿ ಕಂಬಕ್ಕೆ ಕಟ್ಟಿ ಹಲ್ಲೆ 

Bharath Vaibhav
ಉಡುಪಿಯಲ್ಲಿ ಹೇಯ ಕೃತ್ಯ : ಮೀನು ಕದ್ದಿರುವ ಆರೋಪದಲ್ಲಿ ಕಂಬಕ್ಕೆ ಕಟ್ಟಿ ಹಲ್ಲೆ 
WhatsApp Group Join Now
Telegram Group Join Now

ಉಡುಪಿ: ಇಲ್ಲಿನ ಮಲ್ಪೆ ಬಂದರಿನಲ್ಲಿ ಮಹಿಳೆಯೊಬ್ಬರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದ್ದು ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಮತ್ತೋರ್ವ ಮಹಿಳೆ ಹಲ್ಲೆ ನಡೆಸಿದ್ದಾರೆ.

ಸುಮಾರು ಮೂರು ದಿನಗಳ ಹಿಂದೆ ಅಂದ್ರೆ ಮಾರ್ಚ್ 16 ರಂದು ಈ ಘಟನೆ ನಡೆದಿದ್ದು ಹೀಗೆ ಮಹಿಳೆಯನ್ನು ಕಟ್ಟಿಹಾಕಿ ಥಳಿಸುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಓರ್ವ ಮಹಿಳೆಯ ಮೇಲೆ ಮತ್ತೋರ್ವ ಮಹಿಳೆ ಮೀನು ಕದ್ದಿರುವ ಆರೋಪ ಮಾಡಿದ್ದು ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದಿದ್ದಾರೆ. ಆ ನಂತರ ಮರಕ್ಕೆ ಮಹಿಳೆಯನ್ನು ಕಟ್ಟಿಹಾಕಿ ಥಳಿಸಲಾಗಿದೆ .ಈ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು ಸದ್ಯ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!