ಚಡಚಣ :ತಾಲೂಕ ಸಮೀಪದ ಉಮರಜ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತಿ ಅಧಿಕಾರಿ ಎಲ್.ಎಫ್.ನದಾಪ. ಮತ್ತು ಅಧ್ಯಕ್ಷರು ಕಂವುಸನ ಇಬ್ರಾಹೀಮ ಸಾವಳೆ ಇವರಿಬ್ಬರೂ ಕೂಡಿ ವಿವಿಧ ಕಾಮಗಾರಿಯ 60 ಲಕ್ಷ ರೂಪಾಯಿ ಗುಳುಂ ಸ್ವಹ ಮಾಡಿದ ಮಹಾ ಭೂಪರು ಇದಕ್ಕೆ ಇಲ್ಲಿಯ ಜನರು ಮತ್ತು ಪ್ರಗತಿಪರ ಸಂಘಟನೆಯ ಜನರು ಇವರ ವಿರುದ್ಧ ಪ್ರತಿಭಟನೆ ಖಂಡಿಸಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತು ಪಂಚಾಯಿತಿ ಮುಂದೆ ದಿನಾಂಕ 14/07/2025 ರಂದು ಸಾಯಂಕಾಲ ದಿಂದ ಅಹೋರಾತ್ರಿ ಪ್ರಾರಂಭಗೊಂಡ ಧರಣಿ ಸತ್ಯಾಗ್ರ ನಡೆಸಿದರು.

ಸತ್ಯಾಗ್ರಹ ಸುದ್ದಿ ಕೇಳಿದಂತೆ ಪಿಡಿಒ ಮತ್ತು ಅಧ್ಯಕ್ಷರು ಎಲ್ಲಿಂದ ಮಂಗ ಮಾಯವಾಗಿದ್ದಾರೆ ಇನ್ನೂ ಗ್ರಾಮ ಪಂಚಾಯಿತಿಗೆ ಸುಳದೆ ಇಲ್ಲ ಇವರ ಮೇಲೆ ಆದಷ್ಟು ಬೇಗ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಇನ್ನು ಉಗ್ರ ಹೋರಾಟ ಮಾಡುತ್ತೇವೆ ಎಂದು ಇಲ್ಲಿಯ ರೈತರು ಖಂಡಿಸಿದರು ವರದಿಗಾರರಿಗೆ ಕರೆ ಮಾಡಿ ಕರೆಸಿ ಇಲ್ಲಿ ನಡೆದಿರುವ ಎಲ್ಲಾ ಬ್ರಷ್ಟಾಚಾರ ಘಟನೆಗಳ ಬಗ್ಗೆ ಕುಲಂಕುಶವಾಗಿ ಮಾಹಿತಿಯನ್ನು ಸಲ್ಲಿಸಿ ವರದಿಗಾರರ ಮುಂದೆ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘದ ಸದಸ್ಯರುಗಳಾದ ಸಂಗಪ್ಪ ಇರ್ಸೂರ, ಯಶ್ವಂತ ಯಲ್ಲಪ್ಪ ಅಂಬಿಗರ ಇನ್ನೂ ಅನೇಕ ಸದಸ್ಯರು ಮತ್ತು ಊರಿನ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ವರದಿ: ಉಮಾಶಂಕರ ಕ್ಷತ್ರಿ




