ಬೆಳಗಾವಿ: ರಾಮ್ ತೀರ್ಥ ನಗರದಲ್ಲಿ ನಡೆದ 19ನೇ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶಿವಾಲಯ ಸಭಾ ಭವನ ಉದ್ಘಾಟನಾ ಮಾಡಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಶಿವಾಲಯ ಸಭಾ ಭವನ ಹೆಚ್ಚು ಶಿಕ್ಷಣಕ್ಕೆ ಉಪಯೋಗವಾಗಬೇಕು ಈ ಭವನ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಹಾಗೂ ಇಲ್ಲಿ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್ ಕೆಎಎಸ್ ಪರೀಕ್ಷೆಗಳಿಗೆ ತಯಾರಿ ನಡೆಸಲು ಇಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ವಾಗಬೇಕು
ಈ ಭವನ ನಿರ್ಮಾಣಗೊಸ್ಕರ ಅನೇಕ ಮಹನೀಯರು ಸಹಾಯ ಹಸ್ತ ನೀಡಿದ್ದಾರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಲುವಾಗಿ ನಾವು ಕೂಡ ಕೈಜೋಡಿಸಲು ತಯಾರಿದ್ದೇವೆ ಎಂದು ಸಚಿವರು ಭರವಸೆ ನೀಡಿದರು .

ಈ ಸಂದರ್ಭದಲ್ಲಿ ಆಹಾರ ಸಚಿವ ಕೆಎಚ್ ಮುನಿಯಪ್ಪ ಮಾತನಾಡಿ ಬಸ್ವಣ್ಣವರ ಅಪ್ಪಟ ಅನಿವಾಯಿಗಳಾದ ಸತೀಶ್ ಜಾರಕಿಹೊಳಿ ಅವರು ಎಲ್ಲಾ ವರ್ಗದ ಜನರನ್ನು ಜೊತೆಗೆ ಕರೆದುಕೊಂಡು ಹೋಗುವ ನಾಯಕತ್ವವನ್ನು ಬೆಳೆಸಿಕೊಂಡಿದ್ದಾರೆ ಸತೀಶ್ ಜಾರಕಿಹೊಳಿ ಅವರನ್ನು ಪ್ರಸಂಶ ಮಾಡಿದರು. ಜಗದ್ಗುರು ಬಸವಣ್ಣನವರ ಆಶೀರ್ವಾದದಿಂದ ಗಾಂಧೀಜಿಯವರ ನೇತೃತ್ವದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾನತೆಯ ಸಂವಿಧಾನವನ್ನು ನೀಡಿದ್ದಾರೆ ತಮ್ಮ ವಿಚಾರ ವ್ಯಕ್ತಪಡಿಸಿದರು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ಮಾತನಾಡಿ ಕಟ್ಟಡ ನಿರ್ಮಾಣಕ್ಕೆ ಅನೇಕ ಮಹನೀಯರು ಸಹಾಯ ಹಸ್ತ ನೀಡಿದ್ದಾರೆ ಮಾಜಿ ಸಂಸದರು ಮಂಗಳ ಅಂಗಡಿ,
ಅನಿಲ್ ಬೆನಕೆ, ಧನ ಸಹಾಯ ಮಾಡಿದ ಮಾನ್ಯರನ್ನು ಸಂಸದರು ಈ ಸಂದರ್ಭದಲ್ಲಿ ನೆನಪಿಸಿಕೊಟ್ಟರು
ಶ್ರೀ ಷ.ಬ್ರ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್,
ಆಹಾರ ಮತ್ತು ನಾಗರಿಕ ಸರಬರಾಜಿ ಸಚಿವರಾದ ಕೆಎಚ್ ಮುನಿಯಪ್ಪ,
ಮಾಜಿ ಮುಖ್ಯಮಂತ್ರಿಗಳು ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್,
ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ್ ,
ಅಧ್ಯಕ್ಷರು ಸಮರ್ಥನಂ ಅಂಗವಿಕಲಕ ಸಂಸ್ಥೆ ಬೆಂಗಳೂರು ಮಹಾಂತೇಶ್ ಕಿವಡಸಣ್ಣವರ ,
ಅಧ್ಯಕ್ಷರು ರಾಮ್ ತೀರ್ಥ ನಗರ ರಹವಾಸಿ ಹಾಗೂ ಶಿವಾಲಯ ಟ್ರಸ್ಟ್ ಕಮಿಟಿ ಬೆಳಗಾವಿ
ಎಸ್ ಎಸ್ ಕಿವಡಸಣ್ಣವರ, ರಾಮ್ ತೀರ್ಥ ರೆಹವಾಸಿ ಸಂಘ ಹಾಗೂ ಶಿವಾಲಯ ಟ್ರಸ್ಟ್ ಕಮಿಟಿ ರಾಮ್ ತೀರ್ಥ್ ನಗರ್, ಯುವಕ ಮಂಡಲ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದ: ಪ್ರತೀಕ ಚಿಟಗಿ




