ಚಿಟಗುಪ್ : ಚಿಟಗುಪ್ಪಾ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಗುರು ಗಂಗಾಧರ ಭಕ್ತ ಪ್ರಭು ದೇವಾಲಯ ಆವರಣದಲ್ಲಿ ನಿರ್ಮಿಸಲಾದ ಬೃಹತ್ ಮಹಾದ್ವಾರವನ್ನು ಖ್ಯಾತ ಉದ್ಯಮಿ ಮೋಹನದಾಸ್ ಮಾದನಶೆಟ್ಟಿ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ದಿವಂಗತ ಶಶಿರೇಖಾ ಮಾದನಶೆಟ್ಟಿ ಅವರ ಸ್ಮರಣಾರ್ಥವಾಗಿ ಸುಮಾರು 80 ಲಕ್ಷಗಳ ರೂಪಾಯಿಗಳ ಬೃಹತ್ ಮಹಾದ್ವಾರ ನಿರ್ಮಿಸಲಾಗಿದೆ.
ಭಕ್ತ ಪ್ರಭುವಿನ ಅನುಗ್ರಹದಿಂದ ನಮ್ಮ ಪರಿವಾರಕ್ಕೆ ಯಾವುದೇ ಕುಂದು ಕೊರತೆ ಬರದಂತೆ ಅವರ ಆಶೀರ್ವಾದ ಸದಾ ನಮ್ಮ ಮೇಲಿದೆ.ಭಕ್ತಿಯಿಂದ ಸ್ಮರಣೆ ಮಾಡಿದಾಗ ಬಕ್ಕ ಪ್ರಭುವಿಂದ ಕರುಣೆ ನಮಗೆ ಸಿಕ್ಕಿದೆ ಮುಂದೆಯೂ ಸಿಗುತ್ತದೆ ಎಂದು ಹೇಳಿದ್ದಾರೆ.
ಪ್ರಮುಖರಾದ ಲಕ್ಷ್ಮಿಕಾಂತ ಕುಲಕರ್ಣಿ,ಗೋಪಾಲ ರೆಡ್ಡಿ,ಅಶೋಕ ರೆಡ್ಡಿ,ಜಗನ್ನಾಥ ರೆಡ್ಡಿ,ರಾಜಪ್ಪ ಮುತ್ಯ ಶಿವಪುತ್ರ ಮಾಲಿಪಾಟೀಲ್, ಪ್ರಭು ನೆಲವಾಳ, ನಾಗಪ್ಪ ಮಕಾಜಿ, ಅಶೋಕ ಸೇವತ್ಕರ್, ಬಸಯ್ಯಸ್ವಾಮಿ, ಪ್ರಭು ಘಾಟೋಳ್ಳಿ, ಭೀಮಶಾ ಬುಡ್ಡಾ ಬಕ್ಕಯ್ಯ ಸ್ವಾಮಿ, ಜಗನ್ನಾಥ ಗಾರಿ ಹಾಗೂ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
ವರದಿ : ಸಜೀಶ ಲಂಬುನೋರ




