Ad imageAd image

ಆರಾಧನಾ ಎಂಬ ಹೆಸರಿನ ವೃದ್ದಾಶ್ರಮ ಉದ್ಘಾಟಿಸಲಾಯಿತು.

Bharath Vaibhav
ಆರಾಧನಾ ಎಂಬ ಹೆಸರಿನ ವೃದ್ದಾಶ್ರಮ ಉದ್ಘಾಟಿಸಲಾಯಿತು.
WhatsApp Group Join Now
Telegram Group Join Now

ಚಿಕ್ಕೋಡಿ : ಇತ್ತೀಚಿನ ದಿನಗಳಲ್ಲಿ ತಮ್ಮ ಮನೆಗಳಲ್ಲಿ ಪ್ರೀತಿ ವಿಶ್ವಾಸಗಳು ಕಮ್ಮಿಗೊಂಡಂತೆ ಮಕ್ಕಳು ಸೊಸೆ ಹಾಗು ತಂದೆ ತಾಯಿಯಲ್ಲಿ ಭೇದಭಾವ ಉಂಟಾಗಿ ಅವರಲ್ಲಿ ಹೊಂದಾಣಿಕೆ ಆಗುವದಿಲ್ಲ

ಆದ್ದರಿಂದ ಅವರ ಕೆಲಸ ನಿವೃತ್ತಿ ಹಾಗೂ ವಯಸ್ಸದ ಮಿತಿ ಮುಗಿದ ಮೇಲೆ ಅಂದರೆ 60ರ ಮೇಲ್ಪಟ್ಟವರಿಗೆ ತಮ್ಮ ಕುಟುಂಬದ ಜೊತೆ ಜೀವನಗಳಿಯುವ ಸರಿಯಾದ ವ್ಯವಸ್ಥೆ ವ್ಯವಹಾರ ಮಾತುಗಳಲ್ಲಿ ವೆತ್ತೆ ಉಂಟಾಗಿ ಆರು ಮನೆ ಬಿಡುವುದು ಹಾಗೂ ಅವರನ್ನು ಬೇರೆ ಕಡೆ ಬಿಟ್ಟು ಬಿಡುವುದು ಇಂತಹ ಸಮಸ್ಯೆಗಳಿಗೆ ಈಗ ಆರಾಧನಾ ಎಂಬುವ ಆಶ್ರಮ ಒಂದು ಚಿಕ್ಕೋಡಿ ಇಂದ್ರಾನಗರದಲ್ಲಿ ಪ್ರಾರಂಭವಾಗಿದೆ.

ಮುಖ್ಯ ಅತಿಥಿಯಾಗಿ ಬಂದ ನಿವೃತ್ತಿ ಕೆ. ಬಿ. ಅಸೂದೆ ಇವರು ಕೂಡ ಮಾತನಾಡಿ ಇಂಥ ವೃದ್ಧಾಶ್ರಮಗಳನ್ನು ತೆಗೆಯುವುದು ಅವಶ್ಯಕತೆ ಇಲ್ಲ ಯಾಕೆಂದರೆ ಇಂತಹ ಸಮಸ್ಯೆಗಳನ್ನು ತಮ್ಮ ತಮ್ಮಲ್ಲಿ ಬಗೆಹರಿಸಿ ಅವರನ್ನು ತಮ್ಮಿಂದ ದೂರಾಗದಂತೆ ನೋಡಿಕೊಳ್ಳುವುದು ಒಳ್ಳೆಯ ವಿಚಾರವೆಂದು ತಿಳಿಸಿದರು.

ಇದೇ ವಿಷಯವನ್ನು ಕುರಿತು ಈ ಆಶ್ರಮದ ಅಧ್ಯಕ್ಷರಾದ ಶ್ರೀ ನಂದಕಿಶೋರ್ ಗೌಡರ್ ಇವರು ಮಾತನಾಡಿ ಬೆಳಗಾವಿಯಲ್ಲಿ ಸಿವಿಲ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿರುವ 152 ತಂದೆ ತಾಯಿಗಳ ಬಗ್ಗೆ ಒಟ್ಟು 70 ತಂದೆ-ತಾಯಿಗಳನ್ನು ತಮ್ಮ ಮನೆಗೆ ಗುರುತಿಸಿ ಕಳುಹಿಸಲಾಗಿದೆ ಆದರೆ ಉಳಿದವರನ್ನು ಅವರ ಸಂಬಂಧಿಕರು ಯಾರು ಬಂದಿಲ್ಲ ಅವರನ್ನು ಕರೆದುಕೊಂಡು ಹೋಗಿಲ್ಲ ಅಂತವರಿಗೆ ಈ ವಿರುದ್ಧಾಶ್ರಮ ಆಸರೆ ಆಗಲಿದೆ ಎಂದರು.

ಇನ್ನು ಸಹಾಯಕರಾದ ಶ್ರೀಮತಿ ಅನ್ನಪೂರ್ಣ ಅನಿಲ್ ನಿರ್ವಾಣಿ ಇವರು ಮಾತನಾಡಿ ಈ ಉರ್ದು ಆಶ್ರಮಕ್ಕೆ ಬಂದಿರ್ತಕ್ಕಂತ ಅವರು ಅನಾಥರಲ್ಲ ಅವರಿಗೆ ಎಲ್ಲ ರೀತಿಯ ಪ್ರೀತಿ ವಿಶ್ವಾಸ ಸಹ ವ್ಯವಸ್ಥೆಗಳು ಎಲ್ಲವನ್ನು ಕೊಟ್ಟು ಅವರನ್ನು ಸರಿಯಾಗಿ ನೋಡಿಕೊಳ್ಳಲಾಗುವುದು ಎಂದರು.

ಇನ್ನು ಈ ಆಶ್ರಮ ಉದ್ಘಾಟನೆಯ ಸಂದರ್ಭದಲ್ಲಿ ಸಂಜೆಯ ಚಿಂಚಲಿ ಆಶ್ರಮ ವ್ಯವಸ್ಥಾಪಕರು, ನ್ಯಾಯವಾದಿಗಳಾದ ಶಂಕರ್ ಲೈನದಾರ್ ,ಸಂಜು ಕಾಂಬಳೆ ಸಹಾಯಕರು, ತಾತ್ಯಾಸಾಬ ಮುಂಡೆ, ವೀರಭದ್ರು ಬಡಿಗೇರ, ಶ್ರೀಮತಿ ಸವಿತಾ ಚಿಂಚನಿ, ಇನ್ ಇತಿತರೆಲ್ಲರು ಹಾಗೂ ಆಶ್ರಮಕ್ಕೆ ಸಂಬಂಧಪಟ್ಟ ಕಾರ್ಯಕರ್ತರು ಸಲಹೆಗಾರರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!