ಮುದಗಲ್ಲ :- 2024-25 ನೇ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವವು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮುದಗಲ್ಲ ಶಾಲೆಯಲ್ಲಿ ವಿನೂತನವಾಗಿ ಜರುಗಿತು.ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಗುಲಾಬಿ ನೀಡುವುದರ ಮೂಲಕ ಸ್ವಾಗತ ಮಾಡಲಾಯಿತು ಹಾಗೂ ಶೈಕ್ಷಣಿಕ ಘೋಷ ವಾಕ್ಯಗಳನ್ನು ಘೋಷಿಸುವದರ ಮೂಲಕ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡರು.ಹಾಗೂ ಎಲ್ಲಾ ಮಕ್ಕಳಿಗೂ ಸಿಹಿಯಾದ ಕೇಸರಿಬಾತ್ ಹಾಗೂ ಉಪ್ಪಿಟ್ಟು ಹಂಚಲಾಯಿತು.
ನಂತರ ಮಾತನಾಡಿದ ಮುಖ್ಯೋಪಾಧ್ಯಾಯರಾದ ಗಾಯತ್ರಿ ಮೇಡಮ್ ಅವರು ಉತ್ತಮ ಕಲಿಕೆಗೆ ಸರ್ಕಾರಿ ಶಾಲೆಯಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಗುತಿದೆ ಎಂದರು,
ಶಾಲಾ ಪ್ರಾರಂಭೋತ್ಸವವನ್ನು ಆಯೋಜಿಸಲಾಗಿದೆ. ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ. ದಾಖಲಾತಿ ಹೆಚ್ಚಿಸಲು ದಾಖಲಾತಿ ಆಂದೋಲನವನ್ನು ಆಯೋಜಿ ಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಗಾಯತ್ರಿ ಮೇಡಮ್ , ಶಿಕ್ಷಕಿಯಾದ
ಮುನ್ನಿಬೇಗಂ, ಶ್ರೀಮತಿ ವೇದಾ,ಹಾಗೂ ಶಿಕ್ಷಕರಾದ ಹನುಮಂತನಾಯಕ್ ,ಮಹಾಂತೇಶ್ ಸರ್ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ