ಮುದಗಲ್ಲ :- ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ನೂತನ ಅಧ್ಯಕ್ಷರಾಗಿ ಮಹಾದೇವಮ್ಮ ನರಸಯ್ಯ ಗುತ್ತಿಗೆದಾರ ಹಾಗೂ ಉಪಾಧ್ಯಕ್ಷ ಅಜ್ಮೀರ್ ಕರಿಂಸಾಬ ಬೆಳ್ಳಿಕಟ್ಟ್ ಅವರು ಪದಗ್ರಹಣ ಸಮಾರಂಭ ಪುರಸಭೆ ಯಲ್ಲಿ ನಡೆಯಿತು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಎಸ್ ಹೂಲಿಗೇರಿ ಅವರು ನೂತನ ಅಧ್ಯಕ್ಷರಾಹ ಮಹಾದೇವಮ್ಮ ಗುತ್ತಿಗೆದಾರ ಹಾಗೂ ಉಪಾಧ್ಯಕ್ಷರಾದ ಅಜೀರ್ ಬೆಳ್ಳಿ ಕಟ್ಟ್ ಅವರಿಗೆ ಸನ್ಮಾನ ಮಾಡಿದರು ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಮಹದೇವಮ್ಮ ಅವರು ಪಟ್ಟಣದ ಸಮಗ್ರ ಅಭಿವೃದ್ಧಿ ಹಾಗೂ ಮೂಲಸೌಲಭ್ಯ ಕಲ್ಪಿಸಲು ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದರು
ನಂತರ ಮಾತನಾಡಿದ ಲಿಂಗಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ ಎಸ್ ಹೂಲಗೇರಿ ಅವರು ಮುದಗಲ್ ಪಟ್ಟಣದಲ್ಲಿ ಹಲವು ಕಾಮಗಾರಿಗಳಿಗೆ ನಮ್ಮ ಅವಧಿಯಲ್ಲಿ ಚಾಲನೆ ನೀಡಿದ್ದೇವೆ ಆದರೆ ಈಗ ಅಧಿಕಾರದಲ್ಲಿರುವ ಜನ ಪ್ರತಿನಿಧಿಗಳ ನಿರ್ಲಕ್ಷ ದಿಂದ ಕಾಮಗಾರಿ ಸ್ಥಗಿತಗೊಂಡಿವೆ ಎಂದರು ಪುರಸಭೆ ಅಭಿವೃದ್ಧಿಗಾಗಿ ನಮ್ಮ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಆದರೆ ತಾಲೂಕಿನ ಚುನಾಯಿತ ಜನಪ್ರತಿನಿಧಿ ಅವುಗಳ ಬಗ್ಗೆ ಕಾಳಜಿವಹಿಸಿ ಅಭಿವೃದ್ಧಿಗಳ ಕಾರ್ಯ ಮಾಡ ಬೇಕಾಗಿರುವುದು ಅವರ ಕರ್ತವ್ಯ ಎಂದರು
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ನಬಿ ಸಾಬ್ ಕಂದಗಲ್, ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶಂಕರಗೌಡ ಗೌಡರ್,ಹಾಗೂ ದಾವೂದ್ ಸಾಬ್ ತಮ್ಮಣ್ಣ ಗುತ್ತೇದಾರ,ಮಹಾಂತೇಶ್ ಪಾಟೀಲ್,ಎಸ್ ಆರ್ ರಸೂಲ್ ,ನ್ಯಾಮತ್ ಉಲ್ಲಾ ಖಾದ್ರಿ, ರಘುವೀರ್ ಚಲುವಾದಿ, ಹುಸೇನ್ ಅಲಿ, ಸತೀಶ್ ಭೋವಿ, ಮಹಾಂತೇಶ ಭೋವಿ ,ಕೃಷ್ಣಚಲುವಾದಿ ,ಪುರಸಭೆಸದಸ್ಯರು,ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ