Ad imageAd image

ಐನಾಪುರ ಸಿದ್ದೇಶ್ವರ 55ನೇ ಜಾತ್ರಾಮಹೋತ್ಸವ32ನೇ ಕೃಷಿ ಮೇಳ ಉದ್ಘಾಟನೆ

Bharath Vaibhav
ಐನಾಪುರ ಸಿದ್ದೇಶ್ವರ 55ನೇ ಜಾತ್ರಾಮಹೋತ್ಸವ32ನೇ ಕೃಷಿ ಮೇಳ ಉದ್ಘಾಟನೆ
WhatsApp Group Join Now
Telegram Group Join Now

ಐನಾಪುರ: ಕೃಷಿ ಆಧಾರಿತ ನಮ್ಮ ದೇಶವು ಅದರಿಂದ ದೂರ ಆಗುತ್ತಿರುವದರಿಂದ ಬರುವ ದಿನಗಳಲ್ಲಿ ಒಂದು ಒಂದು ಹನಿ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ದೇಶದಲ್ಲಿ ನಿರ್ಮಾಣ ಆಗುವ ದಿನಗಳು ಬಹಳ ದೂರವಿಲ್ಲಾ ಎಂದು ಶಾಸಕ ರಾಜು ಕಾಗೆ ಕಳವಳ ವ್ಯಕ್ತಪಡಿಸಿದರು.

ಅವರು ಮಂಗಳವಾರ ತಾಲ್ಲೂಕಿನ ಐನಾಪೂರ ಪಟ್ಟಣದ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ 32ನೇ ಬೃಹತ್ ಕೃಷಿ ಮೇಳವನ್ನು ಉದ್ಘಾಟಿಸಿ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ದೇಶದಲ್ಲಿ ನಿಸರ್ಗದ ಮೇಲೆ ನಿರಂತರವಾಗಿ ಕೈಗಾರಿಕೋದ್ಯಮಗಳಿಂದ,ವಾಣಿಜ್ಯ ಉದ್ಯಮಗಳಿಂದ ಭೂಮಿ ಒತ್ತಡಕ್ಕೆ ಒಳಗಾಗಿರುವದರಿಂದ ಕೃಷಿಗೆ ಬಲವಾದ ಪೆಟ್ಟು ಬಿಳುತ್ತಿದೆ ಇದು ನಿಲ್ಲಬೇಕು ಈಗ ಯಾವ ರೈತನು ತನ್ನ ಮನೆಯಲ್ಲಿ ಹಿಂದಿನ ಕಾಲದಂತೆ ಧನ ಕರು ಎತ್ತುಗಳನ್ನು ಸಲಹುತ್ತಿಲ್ಲಾ ಇದರಿಂದ ಸಾವಯುವ ಗೊಬ್ಬರ ಕೊರತೆಯಾಗಿ ಭೂಮಿ ತನ್ನ ಫಲವತ್ತತೆಯನ್ನು ಕಳೆದು ಕೊಳ್ಳುತ್ತಿವೆ ಮತ್ತು ರೈತರು ಕೃಷಿಯಲ್ಲಿ ಶ್ರಮವಹಿಸುತ್ತಿಲ್ಲಾ ಇದು ಬದಲಾಗಬೇಕು ಸಾವಯುವ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಅಂದಾಗ ಮಾತ್ರ ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾದ್ಯ ಎಂದು ಹೇಳಿದರು.

ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಕವಲಗುಡ್ಡ ಅಮರೇಶ್ವರ ಮಹಾರಾಜರು ಕೃಷಿ ಮಾಡಬೇಕಾದರೆ ಅಂತರಂಗದ ಕೃಷಿ ಮಾಡಿದರೆ ಮಾತ್ರ ಬಹಿರಂಗದ ಕೃಷಿ ಮಾಡಲು ಸಾಧ್ಯ ಐನಾಪೂರ ಸುತ್ತಮುತ್ತಲಿನ ಪ್ರದೇಶದ ರೈತರು ಇಂತಹ ಬೃಹತ್ ಕೃಷಿ ಮೇಳಕ್ಕೆ ಆಗಮಿಸಿ ಲಾಭ ಪಡೆಯಬೇಕು ಎಂದು ಕರೆ ನೀಡಿದರು ಮುಂದೊಂದು ದಿನ ಕೃಷಿಗೆ ಇದೇರೀತಿ ಪೆಟ್ಟುಗಳು ಬೀಳುತ್ತಾ ಹೊದರೆ ರೈತನ ಕಾಲಿಗೆ ಬಿದ್ದು ನನಗೆ ಅನ್ನ ನೀಡು ಎಂದು ಬೇಡಿಕೊಳ್ಳುವು ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಭವಿಷ್ಯ ನುಡಿದರು.
ಶ್ರೀ ಕೇರಿ‌ ಸಿದ್ದೇಶ್ವರನ ಬೇಟ್ಟಿಗೆ ಮೋಳೆ ಗ್ರಾಮದ ಓಘ ಸಿದ್ದನ ಪಾಲಿಕೆ ಒಳಗೊಂಡು ವಿವಿಧ ಗ್ರಾಮಗಳ ಹನ್ನೊಂದು ಪಲ್ಲಕ್ಕಿಗಳು ಬಂದಿದ್ದು ಸಹಸ್ರಾರು ಭಕ್ತರು ಭಂಡಾರದಲ್ಲಿ ಮಿಂದೆದ್ದರು.

 

ಈ ಎಲ್ಲ ದೇವರು ಕೂಡುವುದೆ ವಿಶೇಷ ಈ ಪಲ್ಲಕ್ಕಿ ಮೇಲೆ ಕೊಬ್ಬರಿ,ಖಾರಿಕ,ಭಂಡಾರ, ಕ್ವಿಂಟಲ್ಗಟ್ಟಲೆ ದೇವರ ಪಲ್ಲಕ್ಕಿ ಹಾರಿಸಿ ಭಕ್ತಿಯ ಪರಾಕಾಷ್ಠೆಯ ಮೇರೆದರು.

ಇದರಲ್ಲಿ ಕೇರಿಸಿದ್ದನ ಪಲ್ಲಕ್ಕಿ ಹಾಗೂ ಓಘ ಸಿದ್ದನ ಪಲ್ಲಕ್ಕಿ ಅಂದರೆ ಮಗ ಹಾಗೂ ದೊಡ್ಡಪ್ಪ  ಭೇಟಿ ಜಾತ್ರೆಯ ವಿಶೇಷವಾಗಿದೆ .ಅದನ್ನು ನೊಡುವುದೆ ಸೌಭಾಗ್ಯ ಎಂದು ಈ ಭಾಗ ಭಕ್ತಾದಿಗಳು ನಂಬಿಕೆ‌ ಹೀಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಲಕ್ಷಾಂತರ ಭಕ್ತರು ದರ್ಶನ ಪಡೆದು ಪುಳುಕಿತರಾದರು.
ಈ ವೇಳೆ ಜಾತ್ರಾ ಕಮೀಟಿ ಅಧ್ಯಕ್ಷ ಸುಭಾಷ ಪಾಟೀಲ, ಪ.ಪಂ ಸದಸ್ಯ ಅರುಣ ಗಾಣಿಗೇರ,ಪ್ರಕಾಶ ರ್ಖೋಬು,ಸುರೇಶ ಗಾಣಿಗೇರ,ಸುಭಾಷ ಪಾಟೀಲ,ಚಮನರಾವ ಪಾಟೀಲ, ಸುನೀಲ ಪಾಟೀಲ, ತಾತ್ಯಾಸಾಬ ಕುಚನೂರೆ, ಜಗದೀಶ ಪಟರ್ವಧನ,ಅರವಿಂದ ಕಾರ್ಚಿ,ಸಹದೇವ ನಾಯಿಕ,ವಿಶ್ವನಾಥ ನಾಮದಾರ, ಸೇರಿದಂತೆ ಅನೇಕರು ಇದ್ದರು.

ವರದಿ : ಮುರಗೇಶ ಗಸ್ತಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!