Ad imageAd image

ಭರತ್ ನಗರದಲ್ಲಿ ಉತ್ತರ ಕರ್ನಾಟಕ ಶೈಲಿಯ ಸ್ವಾದದ ಊಟದ ಹೋಟೆಲ್ ಅನ್ನಧಾರೆ ಉದ್ಘಾಟನೆ 

Bharath Vaibhav
ಭರತ್ ನಗರದಲ್ಲಿ ಉತ್ತರ ಕರ್ನಾಟಕ ಶೈಲಿಯ ಸ್ವಾದದ ಊಟದ ಹೋಟೆಲ್ ಅನ್ನಧಾರೆ ಉದ್ಘಾಟನೆ 
WhatsApp Group Join Now
Telegram Group Join Now

ಬೆಂಗಳೂರು : ದಕ್ಷಿಣ ಕರ್ನಾಟಕದ ಊಟ ಕ್ಕಿಂತ ಉತ್ತರ ಕರ್ನಾಟಕ ಊಟದಲ್ಲಿ ಭಿನ್ನವಾಗಿ, ಇಲ್ಲಿ ಕೆಂಪು ಮೆಣಸಿನಕಾಯಿಗಳನ್ನು ಬಳಸಿ ಹೆಚ್ಚು ಮಸಾಲೆಯುಕ್ತ ಖಾದ್ಯಗಳನ್ನು ಅಂದರೆ (ಚಟ್ನಿಪುಡಿ) ತಯಾರಿಸಲಾಗುತ್ತದೆ ಎಂದು ಅನ್ನಧಾರೆ ಹೋಟೆಲ್ ಮಾಲೀಕ ಮಂಜೇಶ್ ನಾಯ್ಕ ಮತ್ತು ಶ್ರೀಮತಿ ಶೈಲಜಾ ಅವರು ಹೇಳಿದರು.
ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ಭಾರತ್ ನಗರದಲ್ಲಿ ಮಂಜೇಶ್ ನಾಯ್ಕ, ಶೈಲಜಾ, ಹರಿಶಂಕರ್ ಮಂಗಳಶೆಟ್ಟಿಇವರುಗಳ ನೇತೃತ್ವದಲ್ಲಿ “ಅನ್ನಧಾರೆ ಹೋಟೆಲ್” ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜಾ ಪುನಸ್ಕಾರ ಮಹಾ ಮಂಗಳಾರತಿ ನೆರವೇರಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಇಂದು ಅನ್ನಧಾರೆ ಹೋಟೆಲ್ ಶುಭಾರಂಭದ ಪ್ರಯುಕ್ತ ಬೆಳಗಿನ ಉಪಹಾರಕ್ಕೆ ಕೇಸರಿ ಬಾತ್ ಮತ್ತು ಖಾರಾ ಬಾತ್ ಉಚಿತ ಮತ್ತು ಮದ್ಯಾಹ್ನದ ಊಟ ಹೋಳಿಗೆ ಊಟ ಉಚಿತವಾಗಿ ಏರ್ಪಡಿಸಿದ್ದು ವಿಶೇಷವಾಗಿತು ಸಾರ್ವಜನಿಕರು ಖುಷಿ ಖುಷಿಯಾಗಿ ಊಟ ಸೇವಿಸಿದರು ಎಲ್ಲರಿಗೂ ಅಭಿನಂದನೆಗಳು ಎಂದರು.

ಹರಿಶಂಕರ್ ಮಂಗಳಶೆಟ್ಟಿ ಅವರು ಸರ್ವರಿಗೂ ಸ್ವಾಗತಿಸಿದರು.

ಅನ್ನಧಾರೆ ಹೋಟೆಲ್ (ಖಾನಾವಳಿ)ಯ ವೈಶಿಷ್ಟ್ಯ ಏನೆಂದರೆ ಪರಿಶುದ್ಧ ಆಹಾರ ಪದಾರ್ಥಗಳು ಇದ್ದು ಕುಳಿತು ಕೊಳ್ಳಲು ಉತ್ತಮ ಆಸನಗಳು ಒಳ್ಳೆಯ ಸುಂದರವಾದ ವಾತಾವರಣ ಒಂದು ಸಲ ಹೋಟೆಲ್ದಲ್ಲಿ ನಾಲಿಗೆ ರುಚಿ ತಿಂಡಿ, ಊಟ ಸ್ವೀಕರಿಸಿದ ಮೇಲೆ ಅನ್ನಧಾರೆ ಹೋಟೆಲ್ ಹೊಗಬೇಕೆಂಬ ಮನಸು ಸೇಳೆಯುತ್ತದೆ ಎಂದು ಹರಿಶಂಕರ್ ಸ್ವಾಗತಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜಾ ನಾಯ್ಕ, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಹೋಟೆಲ್ ಸಂಘಗಳ ಮಾಲೀಕರು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.

ವರದಿ :ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!