ಇಲಕಲ್:- 2024-25 ನೇ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವವು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾ ಶಾಲೆಯಲ್ಲಿ ವಿನೂತನವಾಗಿ ಜರುಗಿತು.
ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಗುಲಾಬಿ ನೀಡುವುದರ ಮೂಲಕ ಸ್ವಾಗತ ಮಾಡಲಾಯಿತು ಹಾಗೂ ಮಕ್ಕಳು ಕನ್ನಡ ವರ್ಣಮಾಲೆಯ ‘ಅ’ ಹಾಗೂ ‘ರ’ ಅಕ್ಷರಗಳ ಆಕಾರದಲ್ಲಿ ನಿಲ್ಲುವುದರ ಮೂಲಕ ಹಾಗೂ ಶೈಕ್ಷಣಿಕ ಘೋಷ ವಾಕ್ಯಗಳನ್ನು ಘೋಷಿಸುವದರ ಮೂಲಕ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡರು.ಹಾಗೂ ಎಲ್ಲಾ ಮಕ್ಕಳಿಗೂ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಪರಶುರಾಮ ಪಮ್ಮಾರ,ಹಿರಿಯ ಶಿಕ್ಷಕರಾದ ಶ್ರೀಮತಿ ಜಿ ಕೆ ಮಠ,ಮುತ್ತಣ್ಣ ಬೀಳಗಿ,ಶ್ರೀಮತಿ ಆರ್ ಎಸ್ ಕೊಡಗಲಿ,ಶ್ರೀ ಎ ಡಿ ಬಾಗವಾನ,ಶ್ರೀಮತಿ ಎಂ ಎನ್ ಅರಳಿಕಟ್ಟಿ,ಶ್ರೀಮತಿ ಎಸ್ ಎಲ್ ಜೋಗಿನ,ಶ್ರೀಮತಿ ಎಂ ಪಿ ಚೇಗೂರ,ಶ್ರೀಮತಿ ಪಿ ಎಸ್ ಹೊಸೂರ,ಶ್ರೀಮತಿ ಎಸ್ ಎಂ ಮಲಗಿಹಾಳ,ಶ್ರೀ ಪ್ರಸನ್ನ ಮೇಗಡಿ,ಶ್ರೀಮತಿ ಸಾಯಿರಾ ಹೆರಕಲ್ ಉಪಸ್ಥತರಿದ್ದರು.
ವರದಿ ದಾವಲ್ ಶೇಡಂ