ನಿಪ್ಪಾಣಿ ತಾಲೂಕಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಘಟಕ
ಉದ್ಘಾಟನೆ ಹಾಗೂ ಹೃದಯ ಅಂಗಳದಲ್ಲಿ ಗ್ರಂಥ ಲೋಕಾರ್ಪಣೆ.
ನಿಪ್ಪಾಣಿ ನಗರದಲ್ಲಿ ಇಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕಾ ಉದ್ಘಾಟನೆ ಹಾಗೂ ಕವಿ ಹಣಮಂತ ನಾಯಕ ವಿರಚಿತ ಹೃದಯಅಂಗಳದಲ್ಲಿ ಗ್ರಂಥ ಲೋಕಾರ್ಪಣೆ ಸಮಾರಂಭ ಅತ್ಯಂತ ಅದ್ದೂರಿಯಾಗಿ ವಿಧಾಯಕವಾಗಿ ಚಿಂಚಣಿ ಸಿದ್ದ ಸಂಸ್ಥಾನ ಮಠದ ಪ ಪೂ ಶಿವಪ್ರಸಾದ ದೇವರ ಸಾನಿಧ್ಯದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ ಪಿ ಜಿ ಕೆಂಪಣ್ಣವರ ಸರ್ ವಹಿಸಿದ್ದರು ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಪ್ರೋ ಹಣಮಂತ ನಾಯಕ ಪದಗ್ರಹಣ ಮಾಡಿದರು ವಿವಿಧ ಗಣ್ಯರನ್ನು ಸಾಧಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ಕನ್ನಡಪರ ಸಂಘಟನೆಗಳ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




