ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಹೊಸ ಸರ್ಕಲ್ ಕಟ್ಟಡವನ್ನು ಉದ್ಘಾಟನೆ ಮಾಡಲಾಯಿತು.
ಬಾಬಾ ಸಾಹೇಬ್ ಅಂಬೇಡ್ಕರ್ 134 ನೇ ಜಯಂತೋತ್ಸವ ಆಚರಣೆ ಮೂಲಕವಾಗಿ ಹೊಸ ಸರ್ಕಲ್ ನಿರ್ಮಾಣ ಮಾಡಲಾಯಿತು.
ರಾಮತೀರ್ಥ ಗ್ರಾಮಸ್ಥರು ಎಲ್ಲರೂ ಕೂಡಿ ರೆಬೆನ್ನ ಕಟ್ ಮಾಡುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಪೂಜೆಯನ್ನು ರೈತ ಸಂಘದ ಮುಖಂಡರಾದ ಪ್ರಕಾಶ್ ಪೂಜಾರಿ ಅವರು ನೆರವರ್ಸಿ ಕೊಟ್ಟರು. ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಲ್ಗೆ ಧ್ವಜಾರೋಹಣ ಮಾಡುವ ಮೂಲಕ ರಾಮತೀರ್ಥ ಗ್ರಾಮದ ಹಿರಿಯರನ್ನು ಬರಮಾಡಿಕೊಡಲಾಯಿತು.
ಶ್ರೀಕಾಂತ್ ಹಲಗೂರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಒಂದೆರಡು ಮಾತುಗಳನ್ನು ಹೇಳುತ್ತಾ ಗ್ರಾಮ ಪಂಚಾಯಿತಿ ಅವರಿಗೆ ಒಂದು ಸಂದೇಶವನ್ನು ಹೇಳಿದರು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿದ್ವಾನ ಹಣ ಅಂದು ಹಣ ಎ ಸಿ ಕಾಲೇನಿಗೆ ಇಟ್ಟಿರುತ್ತಾರೆ. ರಾಮತೀರ್ಥ್ ಗ್ರಾಮ ಒಂದು ಚಿಕ್ಕದಾಗಿರುವುದರಿಂದ ನಮ್ ರಾಮತೀರ್ಥ ಗ್ರಾಮಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕೆಂದು ಹೇಳಿದರು.
ರಾಮತೀರ್ಥ ಗ್ರಾಮದ ಹಿರಿಯ ಮುಖಂಡರಾದ ಕಲ್ಲಪ್ಪ ಗುಡ್ಡಡಗಿ ಅವರು ಮಾತನಾಡುತ್ತಾ ಬಾಬಾ ಸಾಹೇಬ್ ಅಂಬೇಡ್ಕರ್ ಕಷ್ಟ ಪಟ್ಟಿರದ್ದು ನೋಡಿದರೆ ಸರ್ಕಲ್ ಅಷ್ಟೇ ಅಲ್ಲ ಅವರದೊಂದು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರೆ ಕಡಿಮೆ ಎಂದು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನಿವಾಯಿಯಾದ ಶಾಂತಪ್ಪ ಕಾಂಬಳೆ ಅವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಮಾಡಿರುವ ಸಾಧನೆ ಮತ್ತು ಅವರ ಕೃತ್ಯಗಳ ಬಗ್ಗೆ ಹೇಳಿದರು.
ರಾಮತೀರ್ಥ ಗ್ರಾಮದ ಹಿರಿಯರಾದ
ಸದಾಶಿವ್ ಹಿರೇಕುರುಬರ ಎಯಕಾನ್ ಪಠಾಣ್ ಪರ್ಸಪ್ಪ ನಾಯಕ್ ಅಶೋಕ್ ಚಳಿಕೇರಿ ಅಶೋಕ್ ಗುರಾಪುರ್ ಮೇರಾಸಾಬ್ ಮುಲ್ಲಾ ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ: ಅಜಯ್ ಕಾಂಬಳೆ