ತುರುವೇಕೆರೆ: ಕನ್ನಡಿಗರಾದ ನಾವು ಕೇವಲ ನವೆಂಬರ್ ತಿಂಗಳ ಕನ್ನಡಾಭಿಮಾನಿಗಳಾಗದೆ ನಂಬರ್ ಒನ್ ಕನ್ನಡಿಗರಾಗಬೇಕಿದೆ ಎಂದು ಸಹಾಯಕ ಪ್ರಾಧ್ಯಾಪಕ ಎಸ್.ಕೆ.ಮಂಜುನಾಥ್ ತಿಳಿಸಿದರು.
ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಪ್ರಸ್ತುತ ಕನ್ನಡ ನೆಲದಲ್ಲಿ ಕನ್ನಡಿಗರಾದ ನಾವು ಕನ್ನಡ ಮಾತನಾಡುವುದೇ ಅವಮಾನ ಎಂಬ ಮನೋಭಾವವನ್ನು ಬೆಳೆಸಿಕೊಳ್ಳುತ್ತಿರುವುದು ದುರಂತ. ಕನ್ನಡ ಕೇವಲ ಒಂದು ಭಾಷೆಯಲ್ಲ, ನಮ್ಮ ಆತ್ಮವಾಗಿದೆ. ವಿದೇಶಿ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಮಾತೃಭಾಷೆಯನ್ನು ಮರೆತು ಆಂಗ್ಲಭಾಷೆ ಬಳಕೆಯನ್ನು ಮೇಲ್ಪಂಕ್ತಿಯಲ್ಲಿ ನಿಲ್ಲಿಸುತ್ತಿರುವುದು ಸರಿಯಲ್ಲ. ಬೇರೆ ಭಾಷೆಗಳನ್ನು ಗೌರವಿಸಿ, ಮಾತೃಭಾಷೆ ಕನ್ನಡವನ್ನು ಪ್ರೀತಿಸುವುದು ಕನ್ನಡಿಗರಾದ ನಮ್ಮ ಸಂಸ್ಕೃತಿಯಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಎಸ್.ಎಂ. ಕಾಂತರಾಜು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಮಹದೇವ್, ಪ್ರಕಾಶ್, ಡಾ.ಚಂದ್ರಯ್ಯ, ಹಂಸ, ವಿಮಲ, ಹರ್ಷ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್