Ad imageAd image

ಸುಲೇಪೇಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ ಎಸ್ ಎಸ್ ಶಿಬಿರ ಉದ್ಘಾಟನೆ

Bharath Vaibhav
WhatsApp Group Join Now
Telegram Group Join Now

ಚಿಂಚೋಳಿ: ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಲೇಪೇಟನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು. ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಕರಾಗಿ ಶ್ರೀಮತಿ ಮಾಣಿಕಮ್ಮ ಪ್ರಾಂಶುಪಾಲರು ಸಿ ಬಿ ಪಾಟೀಲ್ ಮಹಾವಿದ್ಯಾಲಯ ಚಿಂಚೋಳಿ ಅತಿಥಿಗಳಾಗಿ ಜಗನಾಥ್ ಸೇರಿಕಾರ್ ಸಂಪಾದಕರು ಪ್ರಜಾವಾಣಿ ಪತ್ರಿಕೆ ಚಿಂಚೋಳಿ ಶ್ರೀ ಮೋಯಿಜ ಪಾಟೀಲ್ ವಿಜಯ ಕರ್ನಾಟಕ ಸಂಪಾದಕರು ಚಿಂಚೋಳಿ ಶ್ರೀ ಸುನಿಲ್ ಸಲಗರ್, ಭಾರತ ವೈಭವ ಪತ್ರಿಕೆ ವರದಿಗಾರರು ಚಿಂಚೋಳಿ ಶಿವಕುಮಾರ್ ತಳವಾರ್ ರಾಜ್ ನ್ಯೂಸ್ ಚಿಂಚೋಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಶರಥ ನಾಯ್ನೂರ್ ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಲೇಪೇಟ ಕಾರ್ಯಕ್ರಮದ ನಿರೂಪಣೆ ಶ್ರೀ ಶಿವಶರಣಪ್ಪ ಸಹಾಯಕ ಪ್ರಾಧ್ಯಾಪಕರು.

ಸುಲೇಪೇಟ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಶ್ರೀ ಶಿವಾನಂದ್ ಹಿರೇಮಠ ರಾಷ್ಟ್ರೀಯ ಸೇವಾ ಯೋಜನೆ ಎಂಬುದು 1969 ಸೆಪ್ಟೆಂಬರ್ 24ರಂದು ನಮ್ಮ ರಾಷ್ಟ್ರದಲ್ಲಿ ಎನ್.ಎಸ್.ಎಸ್. ಆರಂಭವಾಯಿತು. ಮಹಾತ್ಮಾಗಾಂಧಿಯವರು ಭಾರತ ದೇಶದಲ್ಲಿ ಗ್ರಾಮ ಸ್ವ-ರಾಜ್ಯದ ಕನಸನ್ನು ಕಂಡರು. ಅದರ ಪ್ರತಿಫಲವೇ ರಾಷ್ಟ್ರೀಯ ಸೇವಾ ಯೋಜನೆಯಾಗಿ ರೂಪುಗೊಂಡಿತು. ಆರಂಭದಲ್ಲಿ 40,000 ವಿದ್ಯಾರ್ಥಿಗಳಿದ್ದ ಈ ಯೋಜನೆ ಪ್ರಸ್ತುತ ಒಂದೊಂದು ವಿಶ್ವವಿದ್ಯಾನಿಲಯಗಳಲ್ಲಿ 10,000ಕ್ಕಿಂತಲೂ ಹೆಚ್ಚುವಿದ್ಯಾರ್ಥಿಗಳಿದ್ದಾರ ಎನ್ ಎಸ್ ಎಸ್ ಘಟಕ ಎಲ್ಲಾ ಕಾಲೇಜುಗಳಲ್ಲೂ ಇರುತ್ತದೆ. ಒಂದು ಘಟಕ ಎಂದರೆ ೧೦೦ ವಿದ್ಯಾರ್ಥಿ ಸ್ವಯಂ ಸೇವಕರು ಇರುತ್ತಾರೆ.

ವರದಿ : ಸುನಿಲ್ ಸಲಗರ

 

WhatsApp Group Join Now
Telegram Group Join Now
Share This Article
error: Content is protected !!