Ad imageAd image

ಹಿರೇಕೋಡಿಯ ರಾಯಲ ಬಡಾವನೆಯಲ್ಲಿ ಸಾವಯವ ಕೃಷಿ ಮಳಿಗೆ ಉದ್ಘಾಟನೆ.

Bharath Vaibhav
ಹಿರೇಕೋಡಿಯ ರಾಯಲ ಬಡಾವನೆಯಲ್ಲಿ ಸಾವಯವ ಕೃಷಿ ಮಳಿಗೆ ಉದ್ಘಾಟನೆ.
WhatsApp Group Join Now
Telegram Group Join Now
ಚಿಕ್ಕೋಡಿ :-ತಾಲೂಕಿನ ಹಿರೆಕೂಡಿ ಗ್ರಾಮದ ಎಕ್ಷoಬಾ ರಸ್ತೆಯಲ್ಲಿ ಸಾವಯವ ಕೃಷಿ ಬಡಾವಣೆಯ ಉದ್ಘಾಟನೆ ಈ ಕಾರ್ಯಕ್ರಮವನ್ನು ಪುರಸಭೆ ಸದಸ್ಯ ಅನೀಲ ಮಾನೆ ಮತ್ತು ಬೆಳಕೂಡದ ಕೃಷಿ ತಜ್ಞ ಟಿ. ಎಸ್‌ ಮೋರೆ ಇವರ ಅಮೃತ ಹಸ್ತದಿಂದ ರಿಬ್ಬನ್ ಕಟು ಮಾಡುವುದರ ಮೂಲಕ ಮೂಲಕ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಲ್ವಿರಾನ್ ಅರ್ಗ್ಯಾನಿಕ್ ಕಂಪಣಿಯ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ ಬಾಗವಾನ ಮಾತನಾಡಿ, ರಾಸಾಯನಿಕ ಗೊಬ್ಬರ ಉಪಯೋಗಿಸಿ ಭೂಮಿಯಲ್ಲಿರುವ ಶಕ್ತಿ ನಾಶಗೊಂಡಿದೆ, ರೈತರು ಕೂಡಲೇ ಎಚ್ಚೆತ್ತು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು, ಇಲ್ಲವಾದರೆ ಬರುವ ದಿನಮಾನಗಳಲ್ಲಿ ಮುಂದಿನ ಪೀಳಿಗೆಗೆ ಅನ್ನ ಸಿಗುವುದೂ ಕಠಿಣವಾಗಲಿದೆ ಎಂದು ಸವಿಸ್ತಾರವಾಗಿ ತಿಳಿಸಿದರು,
ಮಾರುಕಟ್ಟೆ ವ್ಯವಸ್ಥಾಪಕರಾದ ಅಕ್ರಮ ಇಪ್ಪೇರಿ ಮಾತನಾಡಿ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬದಿಗಿಟ್ಟು, ಸಾವಯವ ಗೊಬ್ಬರ ಕೀಟನಾಶಕ ಬಳಸಿ ಬೆಳೆ ಬೆಳೆಯಿರಿ ಇದರಿಂದ ಆರೋಗ್ಯವಂತ ಆಹಾರ ಬೆಳೆಯುವುದರ ಜೊತೆಗೆ ಭೂಮಿಗೆ ಹೆಚ್ಚಿನ ಶಕ್ತಿ ಬರಲಿದೆ ಎಂದು ಹೇಳಿದರು,
ಟಿ.ಎಸ್.ಮೋರೆ ಇವರು ಮಾತನಾಡಿ, ಮಾರುಕಟ್ಟೆಯಲ್ಲಿ ಹಣ ಮಾಡುವ ದುರುದ್ಧೇಶದಿಂದ ಸಾವಯವ ವಸ್ತುಗಳೆಂದು ಹೇಳಿಕೊಂಡು ನಕಲಿ ಆಹಾರ ಪದಾರ್ಥಗಳನ್ನು ಜನರಿಗೆ ಮಾರುತ್ತಿರುವುದು ಹೆಚ್ಚಾಗಿದೆ, ಸಾರ್ವಜನಿಕರು ಎಚ್ಚರವಹಿಸಬೇಕೆಂದು ತಿಳಿಸಿದರು, ಮಿರಾಸಾಬ ಸಯ್ಯದ ಇವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು,
ಈ ಸಮಾರಂಭಕ್ಕೆ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ಶ್ರೀ ಅಲ್ಲಮಪ್ರಭು ಅನ್ನದಾನ ಸಮಿತಿ ಅಧ್ಯಕ್ಷ ರಣಜೀತ ಶಿಂದೆ, ಮೋಸಿನ ಬಾಡಕರ, ಮತೀನ ಮುಜಾವರ, ಮೊಯಿನೊದ್ದಿನ್, ಮುನ್ನಾ ಮಕಾನದಾರ, ಇರ್ಫಾನ್ ತಾಂಬೋಳಿ, ಅವಿ ಸಾಖರೆ, ಗೀತಾ ವಾಘೆ ಸೇರಿದಂತೆ ನೂರಾರು ರೈತ ಪರಿವಾರದವರು ಉಪಸ್ಥಿತರಿದ್ದರು.
ವರದಿ:- ರಾಜು ಮುಂಡೆ
WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!