
ಹಾವೇರಿ: ನಿನ್ನೆ ದಿನಾಂಕ 14-09-2025 ರಂದು ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಹಾವೇರಿ ಜಿಲ್ಲೆಯಲ್ಲಿ ಪ್ರಜಾಸಂಗ್ರಾಮ ಕೋ-ಆಪರೇಟಿವ್ ಸೊಸೈಟಿಯ ನೂತನ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ “ಸಹಕಾರ ಚಳುವಳಿಗಳು ಗ್ರಾಮೀಣ ಜನರ ಆರ್ಥಿಕ ಪ್ರಗತಿಗೆ ಬುನಾದಿಯಾಗಿವೆ. ಪ್ರಜಾಸಂಗ್ರಾಮ ಕೋ-ಆಪರೇಟಿವ್ ಸೊಸೈಟಿಯ ಹೊಸ ಪ್ರಧಾನ ಕಚೇರಿ ರೈತರ, ಕಾರ್ಮಿಕರ ಹಾಗೂ ಸಾಮಾನ್ಯ ಜನರ ಹಿತದೃಷ್ಟಿಯಿಂದ ಇನ್ನಷ್ಟು ಸೇವಾ ಚಟುವಟಿಕೆಗಳನ್ನು ವಿಸ್ತರಿಸುವತ್ತ ಪಥಪ್ರದರ್ಶಿಯಾಗಲಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರು. ಸ್ವಾಮೀಜಿಗಳು. ಮುಖಂಡರು, ಅಧಿಕಾರಿಗಳು, ಸೊಸೈಟಿಯ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




