Ad imageAd image

ಇಟಕಾಲ ಗ್ರಾಮದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿ ಕೇಂದ್ರ ಉದ್ಘಾಟನೆ.

Bharath Vaibhav
ಇಟಕಾಲ ಗ್ರಾಮದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿ ಕೇಂದ್ರ ಉದ್ಘಾಟನೆ.
WhatsApp Group Join Now
Telegram Group Join Now

ಸೇಡಂ : ತಾಲೂಕಿನ ಇಟಕಾಲ್ ಗ್ರಾಮದ ಅಂಗನವಾಡಿ ಕೇಂದ್ರ ಒಂದರಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿ ಉದ್ಘಾಟನೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರದ ಶ್ರೀಮತಿ ನರಸಿಂಗಮ್ಮ ಪೊಟೇಲಿ, ಉಪಾಧ್ಯಕ್ಷರದ ಸಾಯಪ್ಪ ಬೋಯಿನಿ ಅಶೋಕ ರೆಡ್ಡಿ ಸಿ,ಆರ್,ಪಿ ಮೊತಾಕಪಲ್ಲಿ ಕ್ಲಸ್ಟರ್ ಮತ್ತು ಶ್ರೀಮತಿ ಮೀನಾಕ್ಷಿ ಪಾಟೀಲ್ ಹಿರಿಯ ಮೇಲ್ವಿಚಾರಕಿ ಮತ್ತು ಶ್ರೀಮತಿ ಸರಿತಾ ಕುಲಕರ್ಣಿ ಹಿರಿಯ ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸೇಡಂ ರವರು ಉದ್ಘಾಟಿಸಿದರು.

ಈ ವೇಳೆ ಮೀನಾಕ್ಷಿ ಪಾಟೀಲ್ ಅವರು ಮಾತನಾಡಿ ಸೇಡಂ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಪದವಿ ಅಥವಾ ಉನ್ನತಶಿಕ್ಷಣ ಪಡೆದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಇದ್ದಲ್ಲಿ ಅ ಕೇಂದ್ರವನ್ನು ಆಯ್ಕೆ ಮಾಡಿ ಮತ್ತು ಮಕ್ಕಳ ಶಿಕ್ಷಣ ಗುಣಮಟ್ಟವು ಪೂರ್ವ ಶಿಕ್ಷಣದಿಂದ ಬೆಳೆಯಬೇಕು ಎನ್ನುವ ದೃಷ್ಟಿಯಿಂದ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.

ಇದೇ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್ ಶಿವನೊಳ್ ಮಾತನಾಡಿ ಗ್ರಾಮದ ಅಭಿವೃದ್ಧಿಯ ಜೊತೆಯಲ್ಲಿ ಶಾಲೆಗಳ ಅಭಿವೃದ್ಧಿ ಮೂಲಭೂತ ಸೌಕರ್ಯಗಳು ಮತ್ತು ಮಕ್ಕಳ ಶಿಕ್ಷಣದ ಗುಣಮಟ್ಟ ಪಾಠದ ಜೊತೆಯಲ್ಲಿ ಆಟವು ಮುಖ್ಯ ಎಂದು ಹೇಳಿ ಪ್ರತಿ ಶಾಲೆಗೆ ಕ್ರೀಡಾ ಕಿಟ್ ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರುಗಳಾದ ಲಾಲಪ್ಪ ಯಾದವ್, ಶಶಿಕುಮಾರ್, ನರ್ಮದಾ, ಸಮೀನ ಬೇಗಂ ಶಿಕ್ಷಕರುಗಳಾದ ನಾರಾಯಣರೆಡ್ಡಿ, ಸತೀಶ್ ಢಗೆ, ಶಿಲ್ಪಾ, ದೇವೀಂದ್ರಮ್ಮ ಅಂಗನವಾಡಿ ಶಿಕ್ಷಕಿ, ಸಾವಿತ್ರಮ್ಮ ಸಹಾಯಕಿ, ಶಿಕ್ಷಣ ಪ್ರೇಮಿಗಳು, ಮಕ್ಕಳ ಪೋಷಕರು, ಶಾಲಾ ಮಕ್ಕಳು ಇದ್ದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!