ಭಾಲ್ಕಿ : ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ). ಮತ್ತು ನಗರ ಪೋಲಿಸ್ ಇಲಾಖೆ ಭಾಲ್ಕಿ ಇವರ ಸಹಯೋಗದೋಂದಿಗೆ ನಗರ ಪೋಲೀಸ್ ಇಲಾಖೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಭಾಲ್ಕಿ ನಗರ ಪೋಲೀಸ್ ಆಙSP ಶಿವಾನಂದ ಪಾವಡಶೆಟ್ಟಿ ರವರು ಉದ್ಘಾಟನೆ ಮಾಡಿದರು.
ಉದ್ಘಾಟನೆ ಮಾಡಿ ಮಾತನಾಡಿದ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡವರಿಗೆ ಅನುಕೂಲವಾಗುವ ಕೆಲಸ ಮತ್ತು ಮಹಿಳೆಯರನ್ನು ಆರ್ಥೀಕ ಸ್ವಾವಲಂಬನೆ ಮಾಡುವ ಕೆಲಸದ ಜೊತೆಗೆ ಸ್ವಾಸ್ತö್ಯ ಸಮಾಜ ನಿರ್ಮಾಣದಲ್ಲಿ ಬಹಳ ಪ್ರಾಮುಖ್ಯತೆ ವಹಿಸಿ ಕರ್ತವ್ಯ ನೀರ್ವಹಿಸುತ್ತಿದ್ದು, ಭಾಲ್ಕಿಯ ನಗರ ಪೋಲಿಸ್ ಠಾಣೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ಶುದ್ದಗಂಗಾ ಘಟಕವೇ ಸಾಕ್ಷಿ ಎಂದು ಹೇಳಿದರು ಮತ್ತು ನಾಗರಿಕರು ಇದರ ಪ್ರಯೋಜನ ಪಡೆಯುವಂತೆ ಮಾಹಿತಿ ನೀಡಿದರು.
ಶ್ರೀ ಕೇತ್ರ ಧರ್ಮಸ್ಥಳ ಯೋಜನೆ ಬಿ.ಸಿ ಟ್ರಸ್ಟ್ (ರಿ). ಬೀದರ ಜಿಲ್ಲೆಯ ನಿರ್ದೇಶಕರಾದ ಶ್ರೀ ಮುರಳಿದರ ಊಐ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರ ಆರ್ಥೀಕ ಸ್ವಾವಲಂಬನೆ ಜೊತೆಗೆ ಸಮಾಜದ ಒಳಿತಿಗಾಗಿ ಸಾರ್ವಜನಿಕವಾಗಿ ಅನೇಕ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುತ್ತದೆ. ಅದರಂತೆ ಶುದ್ದಗಂಗಾ ಘಟಕವನ್ನು ಪ್ರಾರಂಭಿಸಿ ಜನರಿಗೆ ಕಡಿಮೆ ದರದಲ್ಲಿ ಶುದ್ದ ಕುಡಿಯುವ ನೀರನ್ನು ಒದಗಿಸಬೇಕೆಂಬ ಆಶಯದಿಂದ ನಿರ್ಮಾಣ ಮಾಡಲಾಗಿದೆ. ಫ್ಲೋರೈಡ್ ನೀರನ್ನು ಕುಡಿದು ಆರೋಗ್ಯ ಸಮಸ್ಯೆಯಾಗುತ್ತಿದ್ದು, ಶುದ್ದ ನೀರು ಕುಡಿದು ಆರೋಗ್ಯವಾಗಿರುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಶೇಶಿಕಲಾ ಅಶೋಕ ಸಿಂದನಕೇರೆ ಸಿಪಿಆಯ್ ಅಂಬರೇಶ್ ಸರ್ ರವರು, ತಾಲೂಕಿನ ಯೋಜನಾಧಿಕಾರಿ ಸಂತೋಷ ಟಿ.ಎನ್, ಮೇಲ್ವಿಚಾರಕರು ಶಿವಾನಂದ್, ಮತ್ತು ಪೋಲೀಸ್ ಇಲಾಖೆಯ ಸಿಬ್ಬಂದಿಗಳು ಯೋಜನೆ ಸೇವಾಪ್ರತಿನಿಧಿಗಳು ಹಾಗು ಊರಿನ ಗಣ್ಯರು ಉಪಸ್ಥಿತರಿದ್ದರು.
ವರದಿ : ಸಂತೋಷ ಬಿಜಿ ಪಾಟೀಲ