ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆಂಡಿಗೇರಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತ್ ಕಾರ್ಯಾಲಯ ಕಟ್ಟಡ ನಿರ್ಮಾಣದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬುಧವಾರ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿದ ಅವರು, ಕಟ್ಟಡ ಕಾಮಗಾರಿಯ ವೇಳೆ ಗ್ರಾಮದ ಹಿರಿಯರ ಸಲಹೆ ಸೂಚನೆ ಪಡೆದು, ನಿಗದಿತ ಸಮಯದಲ್ಲಿ ಕಟ್ಟಡವನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಗ್ರಾಮೀಣ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಮುಂದಿನ 15 ದಿನಗಳಲ್ಲಿ ಹಲವಾರು ಸಮುದಾಯ ಭವನ, ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ ಬಹಳಷ್ಟು ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಚಾಲನೆ ನೀಡಲಿದ್ದಾರೆ. ಎಲ್ಲರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಲಾಗುತ್ತಿದೆ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
ಈ ಸಮಯದಲ್ಲಿ ಮಲ್ಲಯ್ಯ ಸ್ವಾಮಿಗಳು, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ತಾಲೂಕಾ ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ ಹೆಡಗೆ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಿವಾನಂದ ಚಂಡು, ಅನ್ನಪೂರ್ಣ ಕುಂಬಾರ, ಸದಸ್ಯರಾದ ಶಂಕರಗೌಡ ಮೇಳೆದ್, ಸಂಗಪ್ಪ ಕುಡಚಿ, ನೀಲಪ್ಪ ಅರಗಂಜಿ, ದುಂಡಪ್ಪ ಮೇಳೆದ್, ಬಸವ್ವ ಚೌಹಾನ್, ಸಕ್ಕೂಬಾಯಿ ದೊಡಮನಿ, ಲಕ್ಷ್ಮಿ ತಳವಾರ, ನೀಲವ್ವ ಹುಲಿಕವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಲ್ಯಾಣಿ ಚೌಗುಲೆ, ಎ.ವಾಯ್.ಬೆಂಡಿಗೇರಿ, ಶೇಖರ್ ಮಾಳಯಿ, ಸಿದ್ದು ಹಾವಣ್ಣವರ್, ಸಂತೋಷ ಅಂಗಡಿ, ರವಿ ಮೇಳೆದ್, ಪ್ರಕಾಶ ಪಾಟೀಲ, ಬಾಳೇಶ್ ಮೂಡಲಗಿ, ಮುರುಸಿದ್ಧ ಬಾಳೇಕುಂದ್ರಿ, ಲಕ್ಷ್ಮಣ ಜಕ್ಕಣ್ಣವರ, ಶಿವಾನಂದ ಮಾಳಾಯಿ, ಬ್ರಹ್ಮಾ ದೊಡಮನಿ, ಸಂಜೀವ ಕುಡಚಿ, ವೀರೇಂದ್ರ ಮೇಳೆದ ಸೇರಿದಂತೆ ಗ್ರಾಮದ ಅನೇಕ ಮಹಿಳೆಯರು ಉಪಸ್ಥಿತರಿದ್ದರು.
ಕೊಠಡಿ ಉದ್ಘಾಟನೆ
ಇದೇ ವೇಳೆ, ಬೆಂಡಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಐದು ಹೆಚ್ಚುವರಿ ಕೊಠಡಿ ಜೊತೆಗೆ ಸ್ಮಾರ್ಟ್ ಕ್ಲಾಸ್ ನ್ನು ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.
ಈ ವೇಳೆ ಎಸ್. ಡಿ.ಎಂ.ಸಿ ಅಧ್ಯಕ್ಷರಾದ ವೀರೇಂದ್ರ ಮೇಳೆದ್, ಉಪಾಧ್ಯಕ್ಷರಾದ ಸಂಗೀತಾ ಡಾಂಗೆ, ಸದಸ್ಯರಾದ ಮಲ್ಲಪ್ಪ ಕಾದ್ರೊಳ್ಳಿ, ಭೀಮನಗೌಡ ಮೇಳೆದ್, ನಾಗರಾಜ ಹುಲಿಕವಿ, ಅರ್ಚನಾ ಖಂಡೋಜಿ, ಸರೋಜಿನಿ ತುರಮರಿ, ಮಲ್ಲಿಕಾರ್ಜುನ ರೊಟ್ಟಿ, ಮಹಾಂತೇಶ ಉಪ್ಪಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಪ್ರತೀಕ ಚಿಟಗಿ