ಚಿಂಚೋಳಿ: ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮಗದಲ್ಲಿ ನಡೆದ ವಿವಿಧ ಕಾಮಗಾರಿಗಳ ಅಡಿಗಲ್ಲು ಉದ್ಘಾಟಿಸಿದರು ಈ ಕಾಮಗಾರಿ ಸುಮಾರು 18 ಕೋಟಿ 58 ಲಕ್ಷ ರೂಪಾಯಿ ವೆಚ್ಚದಲ್ಲಿ ಕೊರಡಂಪಳ್ಳಿ ಕೆರೊಳ್ಳಿ ಮುಖಾಂತರ ಗಡಿಕೇಶ್ವಾರದಿಂದ ಹೊಡೆಬೀರನಳ್ಳಿ ಕ್ರೌಸ್ ನವರೆಗೆ ಕಾಮಗಾರಿ ಕೈಗೊಳ್ಳಲಾಗಿದೆ, ಕಲ್ಯಾಣ ಪಥ ಯೋಜನೆ ಅಡಿಯಲ್ಲಿ ಪ್ರತಿ ಮತಕ್ಷೇತ್ರದಲ್ಲಿ ಸುಮಾರ 40-50 ಕಿಮಿ ರಸ್ತೆಯನ್ನು ಗ್ರಾಮೀಣ ಭಾಗದ ಜನರಿಗೆ ಅನೂಕುಲ ಮಾಡಿಕೊಡಲು ಪ್ರಗತಿ ಪರ ದೊಡ್ಡ ಹೆಜ್ಜೆ ಆಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಇಲಾಖೆ ಸಚಿವರು ಹಾಗೂ ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದ್ದರು.
ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಮತಕ್ಷೇತ್ರದ ಗಡಿಕೇಶ್ವರ ದಿಂದ ಕೊರಡಂಪಳ್ಳಿ ವಾಯಾ ಕೆರೋಳ್ಳಿವರೆಗೆ ರಸ್ತೆ ಸುಧಾರಣೆ ಕಾಮಗಾರಿಯ ಕಾಮಗಾರಿ ಅಂದಾಜು ಮೊತ್ತ: 1157.00 ಲಕ್ಷಗಳು ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಯೋಜನಾ ವಿಭಾಗ ಕಲಬುರಗಿ 2024-25ನೇ ಸಾಲಿನ ಕಲ್ಯಾಣ ಪಥ ಯೋಜನೆ ಅಡಿಯಲ್ಲಿ ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಮತಕ್ಷೇತ್ರದ ಎಸ್.ಎಚ್. ದಿಂದ ಗಡಿಕೇಶ್ವರ ವರೆಗೆ ರಸ್ತೆ ಸುಧಾರಣೆ ಕಾಮಗಾರಿಯ, ಕಾಮಗಾರಿ ಅಂದಾಜು ಮೊತ್ತ: 701.00 ಲಕ್ಷಗಳು ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರವರು.
ಗಡಿಕೇಶ್ವಾರ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ರೂ.59 ಲಕ್ಷ.ಉರ್ದು ಶಾಲೆಯ ಎರಡು ಕೋಣೆಗಳ ನಿರ್ಮಾಣಕ್ಕೆ 35ಲಕ್ಷ ರೂ.ಗ್ರಾಮದ ಮರಗಮ್ಮ ದೇವಸ್ಥಾನ ಅಭಿವೃದ್ಧಿಗೆ 5 ಲಕ್ಷ ರೂ. ಗ್ರಾಮದಲ್ಲಿ ಸಿಸಿ ರಸ್ತೆ ಚರಂಡಿಗೆ 35 ಲಕ್ಷ ರೂ. ಗ್ರಾಮದ ಯಲ್ಲಮ್ಮಾಯಿ ದೇವಸ್ಥಾನಕ್ಕೆ 5 ಲಕ್ಷ ರೂ. ಗ್ರಾಮದ ಪ.ಜಾತಿ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉನ್ನತೀಕರಣಕ್ಕೆ 14 ಲಕ್ಷ ರೂ.ಗ್ರಾಮದ ಮುಸ್ಲಿಂ ಕಾಲೋನಿಯಲ್ಲಿ ಸಿಸಿರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂ. ಒಟ್ಟು 2 ಕೋಟಿ 15 ಲಕ್ಷ ಕಾಮಗಾರಿಗಳು ಇಡಲಾಗಿದೆ ಗ್ರಾಮಗಳ ಅಭಿವೃದ್ಧಿಗೆ ಮೊದಲು ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಸೇಡಂ ದಿಂದ ಸುಲೇಪೇಟ ರಸ್ತೆಗೆ ಮರು ಡಾಂಬರಿಕರಣ ಒಟ್ಟು 10 ಕೊಟಿ ರೂ.ವೆಚ್ಚದ ಕೆಲಸ ನಡೆಯುತ್ತಿದೆ,ನಿಡಗುಂದಾದಿಂದ ಹಲಕೋಡ ಪೊತಂಗಲ ಜಟ್ಟೂರ ಗ್ರಾಮಗಳ ರಸ್ತೆ ನಿರ್ಮಾಣಕ್ಕೆ 14 ಕೋಟ್ಟಿ ವೆಚ್ಚ ಮಾಡಲಾಗಿದೆ, ಬುರಗಪಳ್ಳಿ ದಿಂದ ಭಕ್ತಂಪಳ್ಳಿ ಒಟ್ಟು 15 ಕೋಟಿ ಅಂದಾಜು ವೆಚ್ಚದಲ್ಲಿ 8 ಕೋಟಿಯ ಕಾಮಗಾರಿಯ ಅಡಿಗಲ್ಲು ಮಾಡಲಾಗಿದೆ ಎಂದು ಹೇಳಿದ್ದರು.
ಚುನಾವಣೆ ಮುಂಚೆ ನೀಡಿದ ಮಾತಿನಂತೆ ಪಂಚ ಗ್ಯಾರಂಟಿಗಳಿಂದ 52 ಸಾವಿರ ಕೊಟಿ ರೂಪಾಯಿಗಳು ಬಡವರ ಮನೆಯ ಬಾಗಿಲುಗೆ ತಲುಪಿಸು ಕಾರ್ಯ ಕಾಂಗ್ರೇಸ್ ರಾಜ್ಯ ಸರಕಾರ ಮಾಡುತ್ತಿದೆ.ಕಲಬುರಗಿಯಲ್ಲಿ ನಿರ್ಮಿಸಿದ ಜಯದೇವ ಹೃದಯ ರೋಗದ ಅಸ್ಪತ್ರೆ ಉಚಿತವಾಗಿ ಸೇವೆ ಮಾಡುತ್ತಿದೆ,92 ಲಕ್ಷ ವೆಚ್ಚದಲ್ಲಿ ಮಕ್ಕಳ ಆರೋಗ್ಯ ಆಸ್ಪತ್ರೆ ಮಾಡಲಾಗುತ್ತಿದೆ,ಸಕ್ಕರೆ ಕಾಯಿಲೆ ರೋಗಿಗಳಿಗೆ 50 ಕೋಟಿ ವೆಚ್ಚದಲ್ಲಿ ಅಸ್ಪತ್ರೆಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದರು.
ಈ ಸಂದರ್ಭದಲ್ಲಿ ಸುಭಾಷ ರಾಠೋಡ, ನಾಗೇಶ್ವರ ಪಾಟೀಲ್,ಮಸ್ತಾನ ಅಲಿ ಪಟ್ಟಿದಾರ,ಗುಂಡಯ್ಯ ಗುತ್ತೆದಾರ,ದಯನಂದ ರೇಮಣಿ,ಸಿದ್ದು ರಂಗನೂರ.ರಾಜಶೇಖರ ರೇಮಣಿ,ಅಯಜ್ ಪಟೇಲ್,ಸುರೇಶ ಪಾಟೀಲ್,ರೇಣುಕಾ ಪ್ರಕಾಶ ರಂಗನೂರ,ಮಾಳಪ್ಪ ಅಪ್ಪಾಜಿ.ವಿಶ್ವನಾಥ zp ಪಕ್ಷದ ಕಾರ್ಯಕರ್ತರು ಗ್ರಾಮಸ್ಥರು ಹಾಜರಿದ್ದರು.
ವರದಿ : ಸುನಿಲ್ ಸಲಗರ