ಮಲ್ಲಮ್ಮನ ಬೆಳವಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಲಹೊಂಗಲ ಹಾಗೂ ಶ್ರೀ ಸಾಯಿ ದೀಪ ಕಣ್ಣಿನ ಆಸ್ಪತ್ರೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳವಡಿ ವಲಯದಲ್ಲಿ ಸೋಮವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಶ್ರೀ ದುರ್ಗಾ ದೇವಿ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆಯನ್ನು ಉಡಿಕೇರಿ ಗ್ರಾಮದ ಶ್ರೀ ದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಉಡಿಕೇರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಶ್ರೀ ಆಶಿಫ್ ಲತಿಪ್ ಅವರು ಮಾತನಾಡಿ ಮಹಿಳೆಯರು, ಮಕ್ಕಳು ಇತ್ತೀಚಿಗೆ ದೃಷ್ಟಿ ದೋಷದಿಂದ ಬಳತಿದ್ದು, ಮೊಬೈಲ್ ಬಳಕೆ, ಟಿವಿ ನೋಡುವುದು ಇಂತ ಅತಿಯಾದ ಬಳಕೆಯು ಸಹ ನಮ್ಮ ಕಣ್ಣಿನ ನರಗಳು ದೋಷಗೋಳ್ಳುತ್ತವೆ. ಇವುಗಳನ್ನ ಆಗಾಗ ಹಾಸ್ಪಿಟಲ್ ನಲ್ಲಿ ವೈದ್ಯರಿಗೆ ತೋರಿಸಿ ಸರಿಯಾದ ಚಿಕಿತ್ಸೆ ಪಡೆಕೊಳ್ಳಿ. ಧರ್ಮಸ್ಥಳ ಯೋಜನೆ ಗ್ರಾಮಗಳ, ಗ್ರಾಮೀಣ ಜನರ ಅಭಿವೃದ್ಧಿಗೆ ತುಂಬಾ ಸಹಾಯದ ಕೊಡುಗೆ ನೀಡುತ್ತದೆ.ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಅವರಿಗೆ ಆರೋಗ್ಯದ ಅರಿವು ಮತ್ತು ಶಿಕ್ಷಣ ಮೂಡಿಸುತ್ತಿದೆ ಎಂದು ಮಾಹಿತಿ ನೀಡಿದರು.
ಅದೇ ರೀತಿ ಉಮೇಶ್ ಹಿತ್ತಲಮನಿ ಅವರು ಮಾತಾಡಿ ಧರ್ಮಸ್ಥಳ ಯೋಜನೆ ಗ್ರಾಮಗಳಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಮತ್ತು ಸಹಾಯಗಳ ಬಗ್ಗೆ ಮಾತನಾಡಿದರು. ಜನರಿಗೆ ಆರೋಗ್ಯದ ಅರಿವು ಬಂದಾಗ ಎಲ್ಲರೂ ಅರೋಗ್ಯವಾಗಿರಲು ಸಾಧ್ಯ.ಮನುಷ್ಯನಿಗೆ ದೇಹದ ಯಾವದೇ ಅಂಗ ಹೋದರೆ ಬದಕಬಹುದು.ಆದರೆ ಕಣ್ಣುಗಳು ತುಂಬಾ ಬಹು ಮುಖ್ಯ ಅಂಗ.ಅವುಗಳ ಜೋಪಾನ ಎಲ್ಲರ ಕರ್ತವ್ಯ.ಹಾಗಾಗಿ ದೃಷ್ಟಿ ದೋಷವಿರುವರು ಅಡ್ಡ ದಾರಿ ಇಡಿಯದೆ ಸರಿಯಾದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲಿ ಉಚಿತ ಕಣ್ಣಿನ ಶಿಬಿರವನ್ನು ಏರ್ಪಡಿಸಿ ಗ್ರಾಮಕ್ಕೆ ಸಹಾಯ ಮಾಡಿದ ಧರ್ಮಸ್ಥಳ ಯೋಜನೆಗೆ ಧನ್ಯವಾದಗಳು ಹೇಳಿದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶೈಲಾ ಜೆ ಮಾತನಾಡಿ ಯೋಜನೆಯ ಅಭಯ ಧಾನಗಳಲ್ಲಿ ಅರೋಗ್ಯ ಧಾನ ಒಂದು ಹಾಗಾಗಿ ಪ್ರತಿ ಗ್ರಾಮಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತ ಸ್ವಾಸ್ತ್ಯ ಮತ್ತು ಸದೃಢ ಸಮಾಜ ನಿರ್ಮಾಣ ಮಾಡುತ್ತ ಬಂದಿದೆ. ಇದಕ್ಕಾಗಿ ಉಚಿತ ಕಣ್ಣಿನ ಶಿಬಿರದ ಕಾರ್ಯಕ್ರಮ ಮಾಡುತ್ತಿದ್ದು ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಭಾರತಿ.ಬ. ಪೂಜಾರ್, ಜ್ಞಾನ ವಿಕಾಸ ಅಧ್ಯಕ್ಷರು ಶ್ರೀಮತಿ ಮಹಾದೇವಿ ಸುತಗಟ್ಟಿ,ಶ್ರೀ ದುರ್ಗಾದೇವಿ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಗುಳಪನವರ್, ಶ್ರೀ ಸಾಯಿ ದೀಪ ಕಣ್ಣಿನ ಆಸ್ಪತ್ರೆಯ ಅಬಿದ್ ಅಲಿ,ಮಹಾಬಳೇಶ್ವರ ಗುಳಪನವರ್,ಗ್ರಾಮ ಪಂಚಾಯತ್ ಸದಸ್ಯರು, ದೇವಸ್ಥಾನ ಕಮಿಟಿಯ ಸದಸ್ಯರು, ಯೋಜನೆಯ ಸೇವಾಪ್ರತಿನಿಧಿ ಪ್ರೇಮಾ, ಮಂಗಳ, ಶೋಭಾ ಹಾಗೂ ಊರಿನ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.ವಲಯ ಮೇಲ್ವಿಚಾರಕರು ಕೆ ಟಿ ಸಂತೋಷ್ ಸ್ವಾಗತ ಮಾಡಿದರು. ಶ್ರೀಮತಿ ಶೈಲಾ ಧನ್ಯವಾದಗಳು ಹೇಳಿದರು.ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವರದಿ : ದುಂಡಪ್ಪ ಹೂಲಿ