ಮೊಳಕಾಲ್ಮೂರು:-ನಮ್ಮ ತಾಲೂಕಿನಲ್ಲಿ ಸುಮಾರು 150 ರಿಂದ 200 ಜನ ವಿಕಲಚೇತನ ಇನ್ನು ಬೇರೆ ಬೇರೆ ಅಪೌಷ್ಟಿಕತೆ ಉಳ್ಳ ಮಕ್ಕಳಿದ್ದಾರೆ, ಎಂದು ನಮ್ಮ ಆಶ್ರಮದ ವಿಕಲ ಚೇತನ ಮಕ್ಕಳ ವಸತಿ ಯುಕ್ತ ಶಾಲೆಯ ಅಧ್ಯಕ್ಷರಾದ ಮೊಳಕಾಲ್ಮೂರು ಶ್ರೀನಿವಾಸ್ ಮೂರ್ತಿ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು, ಈ ಭಾಗದಲ್ಲಿ ಸುಮಾರು 200 ಬುದ್ದಿಮಾಂದ್ಯ ಮಕ್ಕಳಿದ್ದಾರೆ, ಈ ಭಾಗದಲ್ಲಿ ಇಂತಹ ವಸತಿಯುಕ್ತ ಶಾಲೆಯ ಯಾವುದು ಇಲ್ಲ ಇದರಿಂದ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ.

ನಮ್ಮ ಶಾಲೆಯಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಕೊಟ್ಟು ಸುಮಾರು ಐದು ವರ್ಷಗಳ ಕಾಲ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ಕೊಟ್ಟು ಕಲಿಸುವಂತಹ ವ್ಯವಸ್ಥೆ ಇದೆ, ಎಲ್ಲಿ ಬುದ್ಧಿಮಾಂದ್ಯ ಮಕ್ಕಳಿದ್ದಾರೋ ಆ ಮನೆಯಲ್ಲಿ ತುಂಬಾ ತೊಂದರೆ ಸಂಕಟ ಉಂಟಾಗುತ್ತದೆ ನೆಮ್ಮದಿ ಇಲ್ಲದ ಜೀವನ ನಡೆಸುವಂತಹ ದುಸ್ಥಿತಿ ಒದಗಿ ಬರುತ್ತದೆ, ಬುದ್ಧಿಮಾಂದ್ಯ ಮಕ್ಕಳನ್ನು ಅಸಡ್ಯವಾಗಿ ನೋಡಿಕೊಳ್ಳುತ್ತಾರೆ ಅಂತಹ ಮಕ್ಕಳನ್ನು ಗುರುತಿಸಿ ನಮ್ಮ ಶಾಲೆಗೆ ಕರೆತನ್ನಿ ಅವರಿಗೆ ಉತ್ತಮ ಶಿಕ್ಷಣ ನೀಡಿ ನಾವು 5 ವರ್ಷಗಳ ಕಾಲ ತಮ್ಮ ಮಕ್ಕಳಂತೆ ಸಾಕಿ ಸಲಹುತ್ತೇವೆ ಎಂದರು.
ನಮ್ಮ ಸಂಸ್ಥೆಯಿಂದ ಅನೇಕ ಮಕ್ಕಳಿಗೆ ಅನುಕೂಲವಾಗುತ್ತದೆ ಈ ಸಂಸ್ಥೆಯು 2022 ರಿಂದ ಪ್ರಾರಂಭವಾಗಿದ್ದು, ನಮ್ಮಲ್ಲಿ ಈಗ 10 ಮಕ್ಕಳು ಇದ್ದಾರೆ. ಈಗ ನಮ್ಮದೇ ಆದ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡಲಿದ್ದೇವೆ ಮಹಾವನ ಬೌದ್ಧಿಕ ವಿಕಲಚೇತನ ಮಕ್ಕಳ ವಸತಿಯುಕ್ತ ಶಾಲೆ ಶುಭೋದಯ ನಗರ ಹಾನಗಲ್ ಗೆ ಹೋಗುವ ದಾರಿಯಲ್ಲಿ ಕಟ್ಟಡವು ಫೆಬ್ರವರಿ ಎರಡು 2025ರ ಭಾನುವಾರದಂದು ಉದ್ಘಾಟನೆ ಆಗಲಿದೆ ಈ ಭಾಗದ ತಾಲೂಕಿನಾದ್ಯಂತ ಬುದ್ಧಿಮಾಂದ್ಯ ಮಕ್ಕಳಿದ್ದಲ್ಲಿ ನಮ್ಮ ಶಾಲೆ ಕರೆತನ್ನಿ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಮ್ಮ ಆಶ್ರಮದ ರಾಜ್ಯ ಸಂಚಾಲಕರಾದ ಯದುಪತಿ, ಉಪಾಧ್ಯಕ್ಷರಾದ ಪಿ ಆರ್ ಶ್ರೀಧರ್, ಕಾರ್ಯದರ್ಶಿ ಜಿಜೆ ಜನಾರ್ದನ, ಪಿ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.
ವರದಿ :ಪಿಎಂ ಗಂಗಾಧರ




