Ad imageAd image

ರಾಮದುರ್ಗ ಹೆಸ್ಕಾಂ ವಿಭಾಗ ಕಛೇರಿ ಹಾಗೂ ಉಪವಿಭಾಗ ಕಛೇರಿಯ ನೂತನ ಕಟ್ಟಡ ಉದ್ಘಾಟನೆ

Bharath Vaibhav
ರಾಮದುರ್ಗ ಹೆಸ್ಕಾಂ ವಿಭಾಗ ಕಛೇರಿ ಹಾಗೂ ಉಪವಿಭಾಗ ಕಛೇರಿಯ ನೂತನ ಕಟ್ಟಡ ಉದ್ಘಾಟನೆ
WhatsApp Group Join Now
Telegram Group Join Now

ರಾಮದುರ್ಗ : ಬೆಳಗಾವಿ ಜಿಲ್ಲೆ, ರಾಮದುರ್ಗ ಪಟ್ಟಣದಲ್ಲಿ ಇಂಧನ ಇಲಾಖೆ ಹೆಸ್ಕಾಂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಯೋಗದೊಂದಿಗೆ ನೂತನ ರಾಮದುರ್ಗ ಹೆಸ್ಕಾಂ ವಿಭಾಗ ಕಛೇರಿ ಹಾಗೂ ಉಪವಿಭಾಗ ಕಛೇರಿಯ ನೂತನ ಕಟ್ಟಡದ ಉದ್ಘಾಟನೆ  ಹೆಸ್ಕಾಂ ಅವರಣದಲ್ಲಿ ಜ್ಯೋತಿ ಬೆಳಗಸುವುದರ ಮೂಲಕ  ಶಾಸಕ ಅಶೋಕ್ ಪಟ್ಟಣ್ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು
ಹೆಸ್ಕಾಂ ಲೈಮನಗಳು ತನ್ನ ಜೀವನದ ಅಂಗವಿಲ್ಲದೆ ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿರುತ್ತಾರೆ ಕಡ್ಡಾಯವಾಗಿ ತಮ್ಮ ಸೇಫ್ಟಿ ಸಲಕರಣೆಗಳನ್ನು ಬಳಸಿ ಕಾರ್ಯನಿರ್ವಹಿಸಲು ಹೇಳಿದರು.

ತಾಲೂಕಿನ ಜನತೆಗೆ ವಾಹನ ನೋಂದಣಿಗೆ ಹಾಗೂ ಡಿವೈಎಸ್ಪಿ ಕಚೇರಿಗೆ ಕೆಲಸಗಳಿಗೆ ಬೈಲಹೊಂಗಲಕ್ಕೆ ಹೋಗುತ್ತಿದ್ದರು. ಈ ಎಲ್ಲಾ ಕಚೇರಿಗಳನ್ನು ಪಟ್ಟಣದಲ್ಲಿ ತಂದು ಜನರಿಗೆ ಅನುಕೂಲ ಕಲ್ಪಿಸಿದರೆ ಅದರ ಬಗ್ಗೆ ಕೃತಜ್ಞತೆಯನ್ನು ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕಿ ನಿರ್ದೇಶಕಿ ವೈಶಾಲಿ ಎಂ.ಎನ್. ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಪಂಚ ಗ್ಯಾರಂಟಿಗಳ ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ನಿರ್ದೆಶಕ ಎಸ್. ಜಗದೀಶ, ಬೆಳಗಾವಿ ವಲಯದ ಮುಖ್ಯ ಇಂಜಿನೀಯ‌ರ್ ಪ್ರವೀಣಕುಮಾರ ಚಿಕಡೆ ಮಾತನಾಡಿದರು.

ಹೆಸ್ಕಾಂ ಅಧ್ಯಕ್ಷರು, ಸೈಯದ್ ಅಜೀಮ್ ಪೀರ ಎಸ್. ಖಾದ್ರಿ ಸರ್ಕಾರದ ಯೋಜನೆಗಳ ಮಾಹಿತಿ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ  ಪುರಸಭೆ ಅಧ್ಯಕ್ಷ  ಲಕ್ಷ್ಮೀ ಜ. ಕಡಕೋಳ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ವೈಶಾಲಿ ಎಮ್. ಎಲ್, ನಿರ್ದೇಶಕರು (ತಾಂತ್ರಿಕ) ಎಸ್ ಜಗದೀಶ, ಮುಖ್ಯ ಇಂಜಿನೀಯರ್ ಬೆಳಗಾವಿ ವಲಯ ಪ್ರವೀಣಕುಮಾರ ಕೆ. ಚಿಕಡೆ, ಗ್ಯಾರೆಂಟಿ ಯೋಜನೆ ತಾಲೂಕ ಅಧ್ಯಕ್ಷ ಜಿಬಿ ರಂಗನ್ ಗೌಡ್ರು, ಹಾಗೂ ರಾಮದುರ್ಗ ವಿಭಾಗದ ಹಾಗೂ ಉಪ ವಿಭಾಗದ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ನೌಕರರು ರೈತರು, ಉಪಸ್ಥಿತರಿದ್ದರು.

ಕಾರ್ಯನಿರ್ವಾಹಕ ಇಂಜಿನೀಯರ್ ಕಿರಣ ಬಿ. ಸಣ್ಣಕ್ಕಿ ಸ್ವಾಗತಿಸಿದರು, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಶಿವಪ್ರಕಾಶ ಕರಡಿ, ವಂದಿಸಿದರು.

ವರದಿ : ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!