ಬೆಂಗಳೂರು : ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಮಾಲೀಕತ್ವದಲ್ಲಿ ನೂತನವಾಗಿ ನಿರ್ಮಿಸಿದ 2ನೇ ಶಾಖೆ ನಿಸರ್ಗ ಪಬ್ಲಿಕ್ ಸ್ಕೂಲ್
ಹೆಗ್ಗನಹಳ್ಳಿಯಲ್ಲಿ ಎಚ್ ಎನ್ ಗಂಗಾಧರ್ ಮತ್ತು ಅವರ ಧರ್ಮ ಪತ್ನಿ ಶ್ರೀಮತಿ ಗೀತಾ ಗಂಗಾಧರ್ , ಸುಪುತ್ರ ಸ್ವರೂಪ್ ಸೇರಿದಂತೆ ಮಕ್ಕಳು ಮೊಮ್ಮಕ್ಕಳು ಕುಟುಂಬಸ್ಥರ ಸಮ್ಮುಖದಲ್ಲಿ ಹೊಮ ಹವಾದಿಗಳು ದೇವತಾ ಕಾರ್ಯ ಪೂಜಾ ಪುನಸ್ಕಾರ ಮಹಾಮಂಗಳಾರತಿ ಪ್ರಸಿದ್ಧ ಅರ್ಚಕರು ನಡೆಸಿಕೊಟ್ಟರು.

ನಂತರ ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಚ್ ಎನ್ ಗಂಗಾಧರ್ ಅವರು ಸರ್ವರಿಗೂ ಸ್ವಾಗತಿಸಿ ಆಗಮಿಸಿದ ಗಣ್ಯರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಸನ್ಮಾನಿಸಿದರು ನಮ್ಮ ನಿಸರ್ಗ ಶಿಕ್ಷಣ ಸಂಸ್ಥೆಯು ಬಡವರ ಕೂಲಿ ಕಾರ್ಮಿಕರ ದೀನದಲಿತರ ಮುದ್ದು ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಪಾಲಕರಿಗೆ ಹೊರೆ ಆಗದಂತೆ ಹಲವಾರು ವರ್ಷಗಳಿಂದ ಪೋಷಕರ ಕಷ್ಟ ಸುಖದ ಕಡೆ ಗಮನ ಹರಿಸುತ್ತಾ ಅವರಿಗೆ ಅನುಕೂಲ ಮಾಡಿಕೊಡುವ ಬರುವ ಸಂಸ್ಥೆ ನಿಸರ್ಗ ಶಿಕ್ಷಣ ಸಂಸ್ಥೆ ಎಂದರೆ ತಪ್ಪಾಗಲಾರದು ಮತ್ತು ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಕಾರ್ಯ ನಿರ್ವಹಿಸುತ್ತಿರುವ ನಮಗೆ ಮತ್ತು ನಮ್ಮ ಶಿಕ್ಷಕ ವೃಂದಕ್ಕೆ ಸಂತೋಷ ತಂದಿದೆ ಈ ನೂತನ ನಿಸರ್ಗ ಪಬ್ಲಿಕ್ ಸ್ಕೂಲ್ ಇಂದಿನಿಂದ ಕಾರ್ಯನಿರ್ವಹಿಸುತ್ತದೆ ತಮ್ಮ ತಮ್ಮ ಮಕ್ಕಳು ನಿಮ್ಮ ಬಂಧು ಮಿತ್ರರ ಮಕ್ಕಳಿಗೆ ಶಾಲೆಗೆ ಕರೆ ತಂದು ಪ್ರವೇಶ ಮಾಡಿ ಎಂದು ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಂ ಇ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜೆ.ಎಂ ದೇಶಯ, ಎಸ್ ವಿ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್ಕೇಶ್,ಸಿಆರ್ ಪಿ ಕುಮಾರ್, ಗೋಪಾಲ್, ಶ್ರೀನಿವಾಸ್, ಯೋಗೇಶ್, ವೆಂಕಟೇಶ್, ನಿಸರ್ಗ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಸಮಸ್ತ ನಾಗರಿಕ ಬಂಧು ಭಗನಿಯರು ಮುಂತಾದವರು ಉಪಸ್ಥಿತರಿದ್ದರು.
ವರದಿ : ಅಯ್ಯಣ್ಣ ಮಾಸ್ಟರ್




