
ನಿಪ್ಪಾಣಿ: ಮೈಸೂರಿನ ನಂತರ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನದಲ್ಲಿ ಆಚರಿಸುವ ನಿಪ್ಪಾಣಿ ತಾಲೂಕಿನ ಬೇಡಕಿಹಾಳದ ಸಿದ್ದೇಶ್ವರ ದಸರಾ ಉತ್ಸವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಮುಖ್ಯ ಕಾರ್ಯಾಲಯದ ನಾಮಫಲಕ ಉದ್ಘಾಟನೆ ,ಹಾಗೂ ದೇಣಿಗೆ ಪಾವತಿ ಪುಸ್ತಕ ಪೂಜೆ ಯೊಂದಿಗೆ ನಾಡ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಬೆಳಿಗ್ಗೆ ಗೆಳೆತಗ ಗ್ರಾಮದ ಸುರೇಶ್ ಸ್ವಾಮಿ ಅವರ ಪೌರಹಿತ್ಯದಲ್ಲಿ ದಸರಾ ಉತ್ಸವ ಕಮಿಟಿ ಅಧ್ಯಕ್ಷ ಸುನಿಲ್ ನಾರಿ ಹಾಗೂ ಕಮಿಟಿಯ ಎಲ್ಲ ಸದಸ್ಯರು ಗ್ರಾಮ ಪಂಚಾಯಿತಿ ಪಿಡಿಓ ಪ್ರಕಾಶ್ ಧನಗರ, ಗ್ರಾಮ ಲೆಕ್ಕಾಧಿಕಾರಿ ಸಂಜಯ್ ನೇಮಣ್ಣವರ್ ಹಾಗೂ ಗ್ರಾಮ ಪಂಚಾಯತಿ ಎಲ್ಲ ಸದಸ್ಯರು ದತ್ತ ಕಾರ್ಖಾನೆ ಸಂಚಾಲಕ ಇಂದ್ರಜಿತ್ ಪಾಟೀಲ್ ಜನಗೂಂಡಾ ದಡ್ಪಾಟೀಲ, ಬಾಬಾ ಸಾಹೇಬ ಉಪಾಧ್ಯೆ ಯವರ ಮುಖ್ಯ ಉಪಸ್ಥಿತಿಯಲ್ಲಿ ವಿಧಿವತ್ತಾಗಿ ಪೂಜಾ ಕಾರ್ಯಕ್ರಮ ಜರುಗಿದವು.
ಈ ಸಂದರ್ಭದಲ್ಲಿ ಸುರೇಶ್ ಸ್ವಾಮಿ ಸುನಿಲ್ ನಾರೆ ಸಂದೀಪ್ ಪಾಟೀಲ್ ಆರ್. ಜಿ. ಡೋಮನೆ, ಎಂ.ಬಿ.ಪಾಟೀಲ ಮಾತನಾಡಿದರು. ತದನಂತರ ಪ್ರತಿ ವರ್ಷದಂತೆ ದಸರಾ ಉತ್ಸವ ಕಮಿಟಿಯ ಮೊದಲ ಮಾನ್ಯತೆಯ ದೇನಿಗೆ ಪಾವತಿ ಅಶೋಕ್ ಶಂಕರ್ ಚೌಗುಲೆ ಅವರಿಂದ ಪ್ರಾರಂಭಿಸಿ ದೇನಿಗೆ ಸಂಗ್ರಹಣೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ದತ್ತ ಕುಮಾರ್ ಪಾಟೀಲ್ ಬಾಳಾಸಾಹೇಬ ಪಾಟೀಲ, ರಾಜು ಹನಬರಟ್ಟಿ, ತಾತ್ಯಾಸಾಹೇಬ ಕೆಸ್ತೆ, ಅಶೋಕ್ ಅರಗೆ,ದಯಾನಂದ ಸುಬೇದಾರ, ಅಶೋಕ ಸುಬೇದಾರ, ಅಜಿತ ಬೆನ್ನಾಳೆ, ಅನಿಲ್ ದೇಶಪಾಂಡೆ,ಸಂಜಯ ಪಾಟೀಲ ಸೇರಿದಂತೆ ದಸರಾ ಕಮಿಟಿ ಸದಸ್ಯರು ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚನೆ




