ಪೀಣ್ಯ ದಾಸರಹಳ್ಳಿ: ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ವ್ಯಾಪ್ತಿಗೆ ಬರುವ ಬಿಬಿಎಂಪಿ ಕಛೇರಿ ಕಟ್ಟಡದಲ್ಲಿ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರ ಜನ ಸಂಪರ್ಕ ಕಚೇರಿಯನ್ನು ಶಾಸಕ ಎಸ್ ಮುನಿರಾಜು, ಮಾಜಿ ಪಾಲಿಕೆ ಸದಸ್ಯ ಎಚ್ ಎನ್ ಗಂಗಾಧರ್, ಬಿಜೆಪಿ ಹಿರಿಯ ಮುಖಂಡ ಕೃಷ್ಣಯ್ಯ, ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಂಗಳ ವಾಟರ್, ಮಾಜಿ ಅಧ್ಯಕ್ಷ ನಾಗೇಶ್, ದಿನೇಶ್ ಮತ್ತು ಮೋಹನ್ ಎಲೆಕ್ಟ್ರಾನಿಕ್ ಟಿ ವಿ ಶೋ ರೂಂ ಮಾಲೀಕ ಮೋಹನ್ ಕುಮಾರ್ ಸೇರಿದಂತೆ ಅನೇಕ ಬಿಜೆಪಿ ಮುಖಂಡ ಮಹಿಳೆಯರ ಸಮ್ಮುಖದಲ್ಲಿ ರಿಬ್ಬನ್ ಕತ್ತರಿ ಲೋಕಾರ್ಪಣೆ ಮಾಡಿ ಪೂಜಾ ಪುನಸ್ಕಾರ ಮಹಾಮಂಗಳಾರತಿ ಜರುಗಿದವು.

ನಂತರ ಶಾಸಕ ಎಸ್ ಮುನಿರಾಜು ಮಾತನಾಡಿ ಜನರ ಕುಂದುಕೊರತೆಗಳ ಪರಿಹಾರಕ್ಕಾಗಿ ಕಚೇರಿ ಉದ್ಘಾಟನೆ ಮಾಡಲಾಗಿದೆ ಜನರ ಎನೇ ಸಮಸ್ಯೆಗಳು ಇರಲಿ ಸ್ಪಂದಿಸುವ ಕಾರ್ಯ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅದಲ್ಲದೆ ಈ ಬಿಬಿಎಂಪಿ ಕಚೇರಿಯಲ್ಲಿ ಹೆಗ್ಗನಹಳ್ಳಿ, ರಾಜಗೋಪಾಲನಗರ ವಾರ್ಡಗಳ ಸಂಬಂಧ ಪಟ್ಟ ಅಧಿಕಾರಿಗಳು ಇರುವುದರಿಂದ ಶಾಸಕರ ಕಚೇರಿ ಮಾಡಲಾಗಿದೆ ನಮ್ಮ ಪಕ್ಷದ ಮುಖಂಡರನ್ನು ಸಂಪರ್ಕಿಸಿ ಅಧಿಕಾರಿಗಳಿಂದ ಆಗುವ ಕೆಲಸವನ್ನು ಮಾಡಲಾಗುತ್ತದೆ ಎಂದು ಶಾಸಕ ಎಸ್ ಮುನಿರಾಜು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮಹಿಳಾ ಮುಖ್ಯಸ್ಥೆ ಹಾಗೂ ಶಾಸಕರ ಧರ್ಮ ಪತ್ನಿ ಸುಜಾತಾ ಮುನಿರಾಜು, ಶಾಸಕರ ಅಳಿಯ ಬಿಜೆಪಿ ಯುವ ಮುಖಂಡ , ಜಿಲ್ಲಾ ಪ್ರದಾನ ಕಾರ್ಯದರ್ಶಿ ಹಾಗೂ ಆರ್ ಎಸ್ ಎಸ್ ಪ್ರಮುಖ ರಂಗಸ್ವಾಮಿ, ಡಾ. ನಾಗೇಶ್ ಕುಮಾರ್ ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




