ಮೊಳಕಾಲ್ಮೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರಾಂಪುರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ 560 ನೇ ಶುದ್ಧ ಗಂಗಾ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದ್ದು ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ N ಹಾಗೂ ಜಗಳೂರು ಜಿಲ್ಲಾ ಕಚೇರಿಯ ಗೌರವಾನ್ವಿತ ನಿರ್ದೇಶಕರಾದ ಜನಾರ್ದನ S ಸರ್. ಮೊಳಕಾಲ್ಮೂರು ಯೋಜನಾ ಕಚೇರಿಯ ಯೋಜನಾಧಿಕಾರಿಗಳಾದ ಶಶಿಧರ್ H ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗುಂಡಪ್ಪ N, ಹಾಗೂ 8 ನೆ ವಾರ್ಡನ್ ಗ್ರಾಮ ಪಂಚಾಯತಿಯ ಸದಸ್ಯರಾದ ಚೆನ್ನಾರೆಡ್ಡಿ ಹಾಗೂ ಸರ್ವ ಸದಸ್ಯರು ಮತ್ತು ಊರಿನ ಮುಖಂಡರು ಹಾಗೂ ವಲಯ ಮೇಲ್ವಿಚಾರಕರು ಮತ್ತು ಶುದ್ಧಗಂಗಾ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಊರಿನ ಸರ್ವ ಜನತೆಯ ಸಮ್ಮುಖದಲ್ಲಿ ಘಟಕವನ್ನು ಉದ್ಘಾಟಿಸಿದರು .
ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಜನಾರ್ಧನ್ ಎಸ್ ಸರ್ ರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಶುದ್ಧ ನೀರು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ತಿಳಿಸಿದರೂ ಹಾಗೂ ಫ್ಲೋರೈಡ್ ನೀರು ಕುಡಿಯುವುದರಿಂದ ಬರುವ ಖಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತಿಳಿಸಿದರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಮತಿ ನಾಗವೇಣಿ N ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು .ಮತ್ತು ವೇದಿಕೆಯಲ್ಲಿ ಗಣ್ಯರುಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ಆಗುವ ಅನುಕೂಲಗಳು ಹಾಗೂ ಶುದ್ಧ ನೀರು ಬಳಕೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು…
ವರದಿ : ಪಿಎಂ ಗಂಗಾಧರ