ಭಾಲ್ಕಿ : ತಾಲೂಕಿನ ಗೊರ ಚಿಂಚೋಳಿ ಗ್ರಾಮದಲ್ಲಿ ಇಂದು ಡಿ ಕೆ ಸಿದ್ರಾಮ* ಅವರ ಮಾರ್ಗದರ್ಶನದಂತೆ ಪ್ರತಾಪ ಪಾಟಿಲ ಅವರ ನೇತೃತ್ವದಲ್ಲಿ ಪರಮ ಪೂಜ್ಯ ನಾಡೋಜ ಪುರಸ್ಕೃತರಾದ ಪೂಜ್ಯ ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ನಿಮಿತ್ಯ ಗೋರಚಿಂಚೋಳಿ ಗ್ರಾಮದಲ್ಲಿ ವಕ್ಷರೋಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಡಿ ಕೆ ಸಿದ್ರಾಮ ಅವರು ಮಾತನಾಡಿ ಡಾ. ಬಸವಲಿಂಗ ಪಟ್ಟದೇವರ ಕೊಡುಗೆ ಸಮಾಜಕ್ಕೆ ಅಪಾರ ಇದೆ. ಸಾಮಾಜಿಕ, ಶೈಕ್ಷಣಿಕ ಹಾಗು ಆರ್ಥಿಕ ರೂಪದಲ್ಲಿ ಸಮಾಜಕ್ಕೆ ಅವರು ಸಹಾಯ ಮಾಡಿದ್ದಾರೆ. ವಿಶ್ವ ಗುರು ಬಸವಣ್ಣನವರ ತತ್ವ ಸಿದ್ದಾಂತಗಳು ಭಾರತದ ಮೂಲೆ ಮೂಲೆಗಳಿಲ್ಲಿ ತೆರಳಿ ಸಾರುವ ಪ್ರಯತ್ನ ಮಾಡಿದ್ದಾರೆ.
ಇಂದಿನ ಸಮಾಜಕ್ಕೆ ಶಿಕ್ಷಣ ಎಷ್ಟು ಮುಖ್ಯವೋ ಸಂಸ್ಕಾರ ಕೂಡ ಅಷ್ಟೆ ಮುಖ್ಯ. ಯಾವುದೇ ಒಳ್ಳೆಯ ಕೆಲಸ ಮಾಡಬೆಕೆಂದರೆ ಸಮಾಜದ ಸಹಕಾರ ಅಗತ್ಯ ಮತ್ತು ಸಮಾಜದ ಸೇವೆ ಮಾಡಲು ಎಂ ಎಲ್ ಏ ಅನ್ನುವ ಮೂರು ಪದಗಳೆ ಮುಖ್ಯ ಅಲ್ಲ ಎಂದು ನುಡಿದರು ನಾವು ಡಾ.ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ನಿಮಿತ್ಯ 75 ಗ್ರಾಮದಲ್ಲಿ ವೃಕ್ಷಾರೋಪಣ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ನುಡಿದರು.
ನಂತರ ಕಿಶನರಾವ ಪಾಟೀಲ ಇಂಚುರಕರ ಮಾತನಾಡಿ ಕೆಲವೊಮ್ಮೆ ನಾವು ಇನ್ನೊಬ್ಬರಿಗೆ ಸಹಾಯ ಮಾಡಿದರೆ ಅವರು ನಮಗೆ ಮೊಸ ಮಡಬಹುದು ಆದರೆ ವೃಕ್ಷಕ್ಕೆ ನಾವು ಕಲ್ಲು ಎಸೆದರು ಅದು ನಮಗೆ ಹಣ್ಣು ಕೊಡುತ್ತದೆ, ನೆರಳು ಕೊಡುತ್ತದೆ. ಇಂದಿನ ದಿನಗಳಲ್ಲಿ ನಾವು ಹಸಿರು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ನುಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ನವ ಚೈತನ್ಯ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರು ಶರದ ದುರ್ಗಳೆ, ಉಪಾಧ್ಯಕ್ಷ ಕೈಲಾಶ ಪಾಟೀಲ ಪ್ರಧಾನ ಕಾರ್ಯದರ್ಶಿ ಜೈರಾಜ ಕೊಳ್ಳಾ, ಶಿವಾಜಿ ಮೇತ್ರೆ, ನವನಾಥ ಪಾಟೀಲ, ಮಲ್ಲಪ್ಪ ದೇಶಮುಖ, ವಿನೋದ ಕಾರಾಮುಂಗೆ, ಬಿಬಿಶನ ಬಿರಾದಾರ, ಕನಕ ಮಲ್ಲೇಶಿ, ಸಂದೀಪ ಪರಷಣ್ಣೆ, ಸಂದೀಪ ಬಿರಾದರ ನರೇಂದ್ರ ಸೋಮಶೇಟ್ಟಿ ಸೇರಿದಂತೆ ಅನೇಕರು ಉಪಸ್ಥಿತಿತರಿದ್ದರು.
ವರದಿ: ಸಂತೋಷ ಬಿಜಿ ಪಾಟೀಲ




