ಚಿಟಗುಪ್ಪ:ಗ್ರಾಮೀಣ ಭಾಗದಲ್ಲಿ ನಡೆಯುವ ಪ್ರತಿ ಕ್ರೀಡೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡಲಾಗುತ್ತದೆ ಎಂದು ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಮಂತ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿ ಸ್ನೇಹಿತರ ಬಳಗದಿಂದ ಶನಿವಾರ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಮೆಂಟ್ ನ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ಮೇಘರಾಜ್ ಬಂಬುಳಗಿ ತಂಡಕ್ಕೆ ಪ್ರಥಮ ಬಹುಮಾನ ಮತ್ತು ಟ್ರೋಫಿ ವಿತರಣೆ ಮಾಡಿ ಅವರು ಮಾತನಾಡಿದರು.
ದ್ವಿತೀಯ ಬಹುಮಾನವನ್ನು ಸಂತ ಲಾರೆನ್ಸ್ ಚರ್ಚ್ನ ಫಾದರ್ ಜಾರ್ಜ್ ಅವರು ವಿತರಿಸಿ,ಕ್ರೀಡೆಯಲ್ಲಿ ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ ಮುಂದೆ ಆಡುವ ಪಂದ್ಯಗಳಲ್ಲಿ ಇನ್ನೂ ಅದ್ಭುತವಾಗಿ ಪ್ರದರ್ಶನ ನೀಡಿ,ಉಳಿದ ಆಟಗಾರರಿಗೆ ಪ್ರೇರಣೆಯಾಗಬೇಕು ಎಂದು ಸಲಹೆ ನೀಡಿದರು.
ಟೂರ್ನಮೆಂಟ್ ನ ಮೊದಲ ಪಂದ್ಯಕ್ಕೆ ಬಿಜೆಪಿ ಪಕ್ಷದ ಮುಖಂಡ ಸಂತೋಷ ಪಾಟೀಲ ಹುಮನಾಬಾದ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಚಾಲನೆ ನೀಡಿ ಎಲ್ಲಾ ತಂಡಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಫಾದರ್ ಅವಿನಾಶ ಗ್ರಾಮ ಪಂಚಾಯತ ಸದಸ್ಯ ರಾಜಕುಮಾರ ಡೆಬ್ಬಿ, ನಿಶಾಂತಕುಮಾರ,ಈಶ್ವರ ನೇಳಗಿ,ಬಾಬು ಡೆಬ್ಬಿ, ಪ್ರಭು ಹಿರೇಭಾವಿ, ಶಿವಾನಂದ ತಂಬಾಕೆ,ಗುರು ಬಂಬುಳಗಿ,ರಾಜು ವಾಡೇಕರ ಸೇರಿ ಅನೇಕರು.
ಸಜೀಶ ಲಂಬುನೋರ :ಚಿಟಗುಪ್ಪ